×
Ad

ಆದಾಯ ತೆರಿಗೆ ವಿವರ ಸಲ್ಲಿಕೆಗೆ ಗಡುವು ವಿಸ್ತರಣೆ ಇಲ್ಲ: ಇಲಾಖೆ ಸ್ಪಷ್ಟನೆ

ಐಟಿಆರ್ ಸಲ್ಲಿಕೆಗೆ ಇಂದು (ಸೆ.15) ಕೊನೆಯ ದಿನ

Update: 2025-09-15 17:17 IST

ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ: ಆದಾಯ ತೆರಿಗೆ ವಿವರ ಸಲ್ಲಿಕೆಗೆ ಸೆಪ್ಟೆಂಬರ್ 15 (ಇಂದು) ಕೊನೆಯ ದಿನವಾಗಿದ್ದು, ಗಡುವನ್ನು ವಿಸ್ತರಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಪೋರ್ಟಲ್‌ ತಾಂತ್ರಿಕ ತೊಂದರೆ ನೀಡುತ್ತಿದೆ ಎಂಬ ದೂರುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೂ, ಪೋರ್ಟಲ್‌ ಸರಾಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪ್ರಕಟಣೆ ನೀಡಿದ ಇಲಾಖೆ, “ಐಟಿ ವಿವರ ಸಲ್ಲಿಕೆ ಗಡುವು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂಬ ಮಾಹಿತಿ ಸುಳ್ಳು. ತೆರಿಗೆ ವಿವರ ಸಲ್ಲಿಕೆಗೆ ಸೆಪ್ಟೆಂಬರ್ 15ನೇ ಅಂತಿಮ ದಿನ. ತೆರಿಗೆ ಪಾವತಿ ಹಾಗೂ ಇತರ ಸೇವೆಗಳಿಗಾಗಿ ನಮ್ಮ ಸಹಾಯವಾಣಿ 24x7 ಲಭ್ಯವಿದೆ. ಸುಳ್ಳು ಸುದ್ದಿಗಳನ್ನು ನಂಬಬೇಡಿ” ಎಂದು ಎಚ್ಚರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News