ಎರಡು ದಿನಗಳ ಅಸ್ಸಾಂ ಭೇಟಿಗಾಗಿ ಗುವಾಹಟಿಗೆ ಆಗಮಿಸಿದ ಪ್ರಧಾನಿ ಮೋದಿ: ಭೂಪೇನ್ ಹಝಾರಿಕಾಗೆ ಗೌರವ ನಮನ ಸಲ್ಲಿಕೆ
ಗುವಾಹಟಿ: ಎರಡು ದಿನಗಳ ಅಸ್ಸಾಂ ಭೇಟಿಯ ಭಾಗವಾಗಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಗುವಾಹಟಿಗೆ ಆಗಮಿಸಿದ್ದು, ದಂತಕತೆ ಗಾಯಕ ಭೂಪೇನ್ ಹಝಾರಿಕಾಗೆ ವಿಶೇಷ ಗೌರವ ನಮನ ಸಲ್ಲಿಕೆಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂತರ, ರವಿವಾರ 19,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅವರನ್ನು ಲೋಕಪ್ರಿಯ ಗೋಪಿನಾಥ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ, ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಆತ್ಮೀಯವಾಗಿ ಬರಮಾಡಿಕೊಂಡರು ಎಂದು ಅವರು ಹೇಳಿದ್ದಾರೆ.
ಮಣಿಪುರದ ಇಂಫಾಲ ಹಾಗೂ ಚೂರಚಂದ್ ಪುರ್ ಗೆ ಭೇಟಿ ನೀಡಿದ ನಂತರ, ಪ್ರಧಾನಿ ಮೋದಿ ಗುವಾಹಟಿಗೆ ಆಗಮಿಸಿದ್ದಾರೆ. ಅವರನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಗುವಾಹಟಿಯಲ್ಲಿನ ಖಾನಪಾರ ಪ್ರದೇಶದಲ್ಲಿರುವ ಪಶುವೈದ್ಯಕೀಯ ಮೈದಾನದಲ್ಲಿ ಆಯೋಜನೆಗೊಂಡಿರುವ ಭೂಪೇನ್ ಹಝಾರಿಕಾರ ಶತಮಾನೋತ್ಸವ ಕಾರ್ಯಕ್ರಮಕ್ಕೆ ಕರೆದೊಯ್ಯಲಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಜ್ಯ ಅತಿಥಿ ಗೃಹದಲ್ಲಿ ಉಳಿದುಕೊಳ್ಳಲಿದ್ದಾರೆ