WAVES ಶೃಂಗಸಭೆಯ ಪ್ರಗತಿ ಪರಿಶೀಲನಾ ಸಭೆ
PC : pib.gov.in
ಹೊಸದಿಲ್ಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ರಾಜ್ಯ ಸಚಿವ ಎಲ್.ಮುಗುರನ್ ಅಧ್ಯಕ್ಷತೆಯಲ್ಲಿ ಮುಂಬೈನಲ್ಲಿ World Audio Visual Entertainment Summit (WAVES) 2025ನ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಜಿಯೊ ಕನ್ವೆನ್ಷನ್ ಸೆಂಟರ್ ನಲ್ಲಿ ಆಯೋಜನೆಗೊಂಡಿದ್ದ ಈ ಸಭೆಯಲ್ಲಿ ಕೇಂದ್ರ ಸರಕಾರ, ಮಹಾರಾಷ್ಟ್ರ ಸರಕಾರದ ನೋಡಲ್ ಅಧಿಕಾರಿಗಳು ಭಾಗವಹಿಸಿದ್ದರು.
WAVESನ ನಾಲ್ಕು ಸ್ತಂಭಗಳಾದ ಪ್ರಸಾರ ಮತ್ತು ಮನರಂಜನೆ, ಎವಿಜಿಸಿ-ಎಕ್ಸ್ಆರ್, ಡಿಜಿಟಲ್ ಮಾಧ್ಯಯಮ ಹಾಗೂ ಆವಿಷ್ಕಾರ ಮತ್ತು ಚಲನಚಿತ್ರಗಳ ವಿಭಾಗಗಳಡಿ ನಡೆಯಲಿರುವ ವಿವಿಧ ಚಟುವಟಿಕೆಗಳ ಪ್ರಗತಿಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿರುವ WAVES Bazar, WAVEX, Bharat Pavilion, Create in India Challengesನಂಥ ವಿವಿಧ ವಿಷಯಗಳ ಕುರಿತು ಈ ವೇಳೆ ಮೌಲ್ಯಮಾಪನ ನಡೆಸಲಾಯಿತು.
ಕಾರ್ಯಕ್ರಮದ ಸಿದ್ಧತೆಗಳ ಪ್ರಗತಿಯ ಕುರಿತು ವಿವಿಧ ಇಲಾಖೆಗಳ ನೋಡಲ್ ಅಧಿಕಾರಿಗಳು ಸಚಿವರಿಗೆ ವಿವರಿಸಿದರು. ಈ ವೇಳೆ, ಶೃಂಗಸಭೆಯ ಸ್ಥಳದಲ್ಲಿ ನಡೆಯುತ್ತಿರುವ ಸಿದ್ಧತೆಗಳನ್ನು ಸಚಿವ ಎಲ್. ಮುರುಗನ್ ವೀಕ್ಷಿಸಿದರು.