ಎಲೆಕ್ಟ್ರಿಕ್ ಹಾರ್ಡ್ ವೇರ್ ಅಂಗಡಿಯಲ್ಲಿ ಅಗ್ನಿ ಅನಾಹುತ: ಒಂದೇ ಕುಟುಂಬದ ನಾಲ್ವರು ಮೃತ್ಯು
Update: 2023-08-30 15:07 IST
Photo: PTI
ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚ್ವಾಡ ಪಟ್ಟಣದಲ್ಲಿ ಚಿಖ್ಲಿ ಪ್ರದೇಶದ ಪೂರ್ಣ ನಗರದಲ್ಲಿರುವ ಪೂಜಾ ಹೈಟ್ಸ್ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.
ಮುಂಜಾನೆ 5 ಗಂಟೆ ಸುಮಾರಿಗೆ ವಸತಿ ಕಟ್ಟಡದ ನೆಲ ಮಹಡಿಯಲ್ಲಿರುವ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿಕಾಣಿಸಿಕೊಂಡಿದೆ.
ಮೃತರಲ್ಲಿ ಇಬ್ಬರು ಬಾಲಕರು ಇದ್ದಾರೆ. ನಾಲ್ವರು ಹಾರ್ಡ್ ವೇರ್ ಅಂಗಡಿಯಲ್ಲಿ ಮಲಗಿದ್ದರು. ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಪಿಂಪ್ರಿ-ಚಿಂಚ್ವಾಡ ಮುನ್ಸಿಪಲ್ ಕಾರ್ಪೂರೇಶನ್ ಅಗ್ನಿಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ.
ಶಾರ್ಕ್ ಸರ್ಕ್ಯೂಟ್ ನಿಂದ ಬೆಂಕಿ ಅನಾಹುತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಮೃತರನ್ನು ಚಿಮ್ನಾರಾಮ್ ಚೌಧರಿ*48 ವರ್ಷ), ನಮ್ರತಾ ಚೌಧರಿ(40 ವರ್ಷ), ಭವೇಶ್ ಚೌಧರಿ(15 ವರ್ಷ) ಹಾಗೂ ಸಚಿನ್ ಚೌಧರಿ(13 ವರ್ಷ) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.