×
Ad

ಸೌದಿ ಬಸ್ ಅಪಘಾತದಲ್ಲಿ 45 ಮಂದಿ ಮೃತ್ಯು: ಹೈದರಾಬಾದ್ ಪೊಲೀಸ್ ಆಯುಕ್ತ

"ಅಪಘಾತದಲ್ಲಿ ಕೇವಲ ಓರ್ವ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ"

Update: 2025-11-17 14:22 IST

ಹೈದರಾಬಾದ್ ಪೊಲೀಸ್ ಆಯುಕ್ತ ವಿ.ಸಿ.ಸಜ್ಜನರ್‌ (Photo:X/@PTI_News)

ಹೈದರಾಬಾದ್: ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 45 ಮಂದಿ ಮೃತಪಟ್ಟಿದ್ದು, ಅವರಲ್ಲಿ ಬಹುತೇಕರು ಹೈದರಾಬಾದ್ ನವರು ಎಂದು ಪ್ರಾಥಮಿಕ ಮಾಹಿತಿಯನ್ನು ಉಲ್ಲೇಖಿಸಿ ಸೋಮವಾರ ಹೈದರಾಬಾದ್ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಪೊಲೀಸ್ ಆಯುಕ್ತ ವಿ.ಸಿ.ಸಜ್ಜನರ್, “ನವೆಂಬರ್ 9ರಂದು ಹೈದರಾಬಾದ್ ನಿಂದ ಜಿದ್ದಾಗೆ ಒಟ್ಟು 54 ಮಂದಿ ತೆರಳಿದ್ದರು. ಅವರೆಲ್ಲ ನವೆಂಬರ್ 23ರಂದು ವಾಪಸು ಮರಳಬೇಕಿತ್ತು” ಎಂದು ಹೇಳಿದ್ದಾರೆ.

ಈ 54 ಮಂದಿಯ ಪೈಕಿ ನಾಲ್ಕು ಮಂದಿ ಕಾರಿನಲ್ಲಿ ಪ್ರತ್ಯೇಕವಾಗಿ ಮದೀನಾಗೆ ತೆರಳಿದ್ದರೆ, ಉಳಿದ ನಾಲ್ಕು ಮಂದಿ ಮಕ್ಕಾದಲ್ಲೇ ಉಳಿದುಕೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.

ಅಪಘಾತದಲ್ಲಿ ಕೇವಲ ಓರ್ವ ವ್ಯಕ್ತಿ ಮಾತ್ರ ಬದುಕುಳಿದಿದ್ದು, ಸದ್ಯ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

“ಅಪಘಾತದಲ್ಲಿ 40 ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ನಮಗೆ ದೊರೆತಿದ್ದು, ನಾವು ಮೃತರ ಕುಟುಂಬದ ಸದಸ್ಯರ ಸಂಪರ್ಕದಲ್ಲಿದ್ದೇವೆ” ಎಂದು ಎಐಎಂಐಎಂ ಶಾಸಕ ಮಜೀದ್ ಹುಸೈನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News