ಸ್ಥಿರವಾದ ಚಿನ್ನ- ಬೆಳ್ಳಿ ಬೆಲೆ; ಮಂಗಳೂರಿನಲ್ಲಿ ಇಂದಿನ ದರವೆಷ್ಟು?

Update: 2026-08-03 13:12 IST

ಸಾಂದರ್ಭಿಕ ಚಿತ್ರ (AI)

ಭೌಗೋಳಿಕ-ರಾಜಕೀಯ ಉದ್ವಿಗ್ನತೆ ಕಡಿಮೆಯಾಗುವ ಸೂಚನೆಗಳಿಂದಾಗಿ ಶುಕ್ರವಾರದ ನಂತರ ಚಿನ್ನ ಮತ್ತು ಬೆಳ್ಳಿ ಸ್ಥಿರವಾಗಿ ವಹಿವಾಟು ನಡೆಸಿದೆ.

ಜೂನ್ 23ರ ನಂತರ ಬಹುತೇಕ ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ 13,000– 13500 ರೂ. ನಡುವೆ ಸ್ಥಿರವಾಗಿದೆ. ಇದೇ ಬೆಲೆಯ ನಡುವೆ ಏರಿಳಿತ ಕಾಣುತ್ತಿದೆ. ಇದೀಗ ಸೋಮವಾರ ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದೆ. ಹೀಗಾಗಿ ಗ್ರಾಹಕರಲ್ಲಿ ಖರೀದಿಯ ಉತ್ಸಾಹ ಮೂಡಿಸಿದೆ.

ಅಮೆರಿಕ- ಇರಾನ್ ಮಾತುಕತೆಯ ನಿರೀಕ್ಷೆಯಿಂದಾಗಿ ತೈಲ ಬೆಲೆಗಳು ಕುಸಿದಿರುವುದು ಮತ್ತು ಅಮೆರಿಕನ್ ಡಾಲರ್ ದುರ್ಬಲವಾಗಿರುವುದು ಚಿನ್ನ-ಬೆಳ್ಳಿ ಬೆಲೆಗೆ ಬೆಂಬಲ ನೀಡಿದ್ದು, ವಿದೇಶಿ ಖರೀದಿದಾರರಿಗೆ ಅಗ್ಗವಾಗುವಂತೆ ಮಾಡಿದೆ. ಹೀಗಾಗಿ ಶುಕ್ರವಾರದ ನಂತರ ಚಿನ್ನ ಮತ್ತು ಬೆಳ್ಳಿ ಸ್ಥಿರವಾಗಿ ವಹಿವಾಟು ನಡೆಸಿದೆ.

ಚಿನ್ನದ ದರದಲ್ಲಿ ಸ್ಥಿರತೆ

ಆಗಸ್ಟ್ 3 ರಂದು ಸೋಮವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಹತ್ತು ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಶನಿವಾರದ ಬೆಲೆಗೆ ಹೋಲಿಸಿದರೆ 1,44,220 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಹತ್ತು ಗ್ರಾಂಗೆ 1,32,200 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಹತ್ತು ಗ್ರಾಂಗೆ 1,08,160 ರೂ. ಗೆ ತಲುಪಿದೆ.

ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?

ಆಗಸ್ಟ್ 3 ರಂದು ಸೋಮವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,422 ರೂ. ರಷ್ಟಕ್ಕೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,220 ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,816 ರೂ. ಬೆಲೆಗೆ ಬಂದು ನಿಂತಿದೆ.

ಸ್ಥಿರವಾದ ಬೆಳ್ಳಿಯ ದರ

ಜುಲೈ 11ರಿಂದ ಬೆಳ್ಳಿಯ ದರ ಬಹುತೇಕ ಪ್ರತಿ ಕೆಜಿಗೆ 2,35,000 ರೂ.ಗೆ ಸ್ಥಿರವಾಗಿತ್ತು. ನಡುವೆ ಒಂದೆರಡು ಬಾರಿ ಪ್ರತಿ ಗ್ರಾಂಗೆ 5 ರೂ. ಏರಿದ ಬೆಳ್ಳಿಯ ದರ ಪ್ರತಿ ಕೆಜಿಗೆ 2,40,000 ರೂ.ಗೆ ತಲುಪಿದ್ದು ಹೊರತುಪಡಿಸಿದರೆ, ಇದೀಗ ಕಳೆದ ಬುಧವಾರದಿಂದ ಇಂದಿನವರೆಗೂ ಪ್ರತಿ ಕೆಜಿಗೆ 2,35,000 ರೂ.ಗೆ ಸ್ಥಿರವಾಗಿ ನಿಂತಿದೆ.

ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?

ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 14,437 ರೂ., 22 ಕ್ಯಾರೆಟ್ ಚಿನ್ನದ ದರ 13,235 ರೂ.

ಮುಂಬೈ: 24 ಕ್ಯಾರೆಟ್ ಚಿನ್ನದ ದರ 14,422 ರೂ., 22 ಕ್ಯಾರೆಟ್ ಚಿನ್ನದ ದರ 13,220 ರೂ.

ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 14,427 ರೂ., 22 ಕ್ಯಾರೆಟ್ ಚಿನ್ನದ ದರ 13,225 ರೂ.

ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 14,455 (+33) ರೂ., 22 ಕ್ಯಾರೆಟ್ ಚಿನ್ನದ ದರ 13,250 (+30) ರೂ.

ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 14,422 ರೂ., 22 ಕ್ಯಾರೆಟ್ ಚಿನ್ನದ ದರ 13,220 ರೂ.

ಹೈದರಾಬಾದ್‌: 24 ಕ್ಯಾರೆಟ್ ಚಿನ್ನದ ದರ 14,422 ರೂ., 22 ಕ್ಯಾರೆಟ್ ಚಿನ್ನದ ದರ 13,220 ರೂ.

ಜೈಪುರ: 24 ಕ್ಯಾರೆಟ್ ಚಿನ್ನದ ದರ 14,437 ರೂ., 22 ಕ್ಯಾರೆಟ್ ಚಿನ್ನದ ದರ 13,235 ರೂ.

ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 14,437 ರೂ., 22 ಕ್ಯಾರೆಟ್ ಚಿನ್ನದ ದರ 13,235 ರೂ.

ಲಕ್ನೋ: 24 ಕ್ಯಾರೆಟ್ ಚಿನ್ನದ ದರ 14,437 ರೂ., 22 ಕ್ಯಾರೆಟ್ ಚಿನ್ನದ ದರ 13,235 ರೂ.

ಕೊಚ್ಚಿ: 24 ಕ್ಯಾರೆಟ್ ಚಿನ್ನದ ದರ 14,422 ರೂ., 22 ಕ್ಯಾರೆಟ್ ಚಿನ್ನದ ದರ 13,220 ರೂ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News