×
Ad

ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಾದರೆ ಮಾಂಸಾಹಾರ ಪೂರೈಸುವ ರೆಸ್ಟೋರೆಂಟ್‌ಗಳಿಂದ ಸಸ್ಯಾಹಾರಿಗಳು ಆಹಾರವನ್ನು ಏಕೆ ಆರ್ಡರ್ ಮಾಡಬೇಕು?: ಮುಂಬೈ ಗ್ರಾಹಕ ನ್ಯಾಯಾಲಯ ಪ್ರಶ್ನೆ

Update: 2025-06-10 13:56 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಓರ್ವ ವ್ಯಕ್ತಿಯು ಸಸ್ಯಾಹಾರಿಯಾಗಿದ್ದು, ಮಾಂಸಾಹಾರ ಅವರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುತ್ತದೆ ಎಂದಾದರೆ ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನೂ ಪೂರೈಸುವ ರೆಸ್ಟೋರೆಂಟ್‌ಗಳಿಂದ ಅವರು ಆಹಾರವನ್ನು ಏಕೆ ಆರ್ಡರ್ ಮಾಡಬೇಕು ಮುಂಬೈನ ಗ್ರಾಹಕ ನ್ಯಾಯಾಲಯ ಪ್ರಶ್ನಿಸಿದೆ.

ಜನಪ್ರಿಯ ʼವಾವ್ ಮೊಮೊʼ ಔಟ್ಲೆಟ್ ಚಿಕನ್ ಮೊಮೊಗಳನ್ನು ಕಳುಹಿಸಿದ ನಂತರ ನಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ ಎಂದು ಸಸ್ಯಹಾರಿಗಳಿಬ್ಬರು ನೀಡಿದ ದೂರನ್ನು ವಜಾಗೊಳಿಸಿದ ಗ್ರಾಹಕ ನ್ಯಾಯಾಲಯ ಈ ಪ್ರಶ್ನೆಯನ್ನು ಕೇಳಿದೆ.

ʼದೂರುದಾರರು ಸಂಪೂರ್ಣವಾಗಿ ಸಸ್ಯಾಹಾರಿಗಳಾಗಿದ್ದರೆ, ಮಾಂಸಾಹಾರಿ ಆಹಾರವು ಅವರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುದಾದರೆ ಕೇವಲ ಸಸ್ಯಾಹಾರಿ ಆಹಾರವನ್ನು ಮಾತ್ರ ಪೂರೈಸುವ ರೆಸ್ಟೋರೆಂಟ್‌ನಿಂದ ಅವರು ಆಹಾರವನ್ನು ಆರ್ಡರ್ ಮಾಡುವ ಬದಲು, ಮಾಂಸಾಹಾರಿ ಮತ್ತು ಸಸ್ಯಾಹಾರಿ ಆಹಾರವನ್ನು ವಿತರಿಸುವ ರೆಸ್ಟೋರೆಂಟ್‌ನಿಂದ ಆಹಾರವನ್ನು ಯಾಕೆ ಆರ್ಡರ್ ಮಾಡಿದ್ದಾರೆʼ ಎಂದು ಗ್ರಾಹಕ ನ್ಯಾಯಾಲಯ ಪ್ರಶ್ನಿಸಿದೆ.

ʼ2020ರ ಡಿಸೆಂಬರ್ 19ರಂದು ಮುಂಬೈನ ಸಿಯಾನ್‌ನಲ್ಲಿರುವ ವಾವ್ ಮೊಮೊಸ್ ಔಟ್‌ಲೆಟ್‌ನಿಂದ ತಂಪು ಪಾನೀಯದೊಂದಿಗೆ 'ಡಾರ್ಜಿಲಿಂಗ್ ಮೊಮೊ ಕಾಂಬೊ' ಅನ್ನು ಆರ್ಡರ್ ಮಾಡಿದ್ದೆವು. ಆದರೆ ಅವರು ಚಿಕನ್ ಮೊಮೊಸ್ ಕಳುಹಿಸಿದ್ದಾರೆ. ಇದರಿಂದ ನಮ್ಮ ಧಾರ್ಮಿಕ ಭಾವನೆಗೆ ನೋವುಂಟಾಗಿದೆ. ನಮಗೆ ಪರಿಹಾರವಾಗಿ 6 ಲಕ್ಷರೂ. ನೀಡಬೇಕು ಎಂದು ಸಸ್ಯಹಾರಿಗಳಿಬ್ಬರು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News