×
Ad

ಭಾರತದ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್, ಅವರ ಪುತ್ರ ಭಯಾನಕ ಕಾರು ಅಪಘಾತದಿಂದ ಪಾರು

Update: 2023-07-05 11:19 IST

ಹೊಸದಿಲ್ಲಿ: ಭಾರತದ ಮಾಜಿ ವೇಗದ ಬೌಲರ್ ಪ್ರವೀಣ್ ಕುಮಾರ್ ಹಾಗೂ ಅವರ ಪುತ್ರ ಮೀರತ್ ನಲ್ಲಿ ಪ್ರಯಾಣಿಸುತ್ತಿದ್ದ ಕಾರಿಗೆ ವೇಗವಾಗಿ ಬಂದ ಟ್ರಕ್ ವೊಂದು ಢಿಕ್ಕಿಯಾಗಿದ್ದು, ತಂದೆ-ಮಗ ಭಯಾನಕ ಅಪಘಾತದಿಂದ ಪಾರಾಗಿದ್ದಾರೆ.

ವರದಿಗಳ ಪ್ರಕಾರ ಮಂಗಳವಾರ ರಾತ್ರಿ ಅಪಘಾತ ಸಂಭವಿಸಿದೆ. ಪ್ರವೀಣ್ ಪಾಂಡವ ನಗರದಿಂದ ಬರುತ್ತಿದ್ದರು.ರಭಸವಾಗಿ ಬಂದ ಟ್ರಕ್ ಢಿಕ್ಕಿಯಾದ ಪರಿಣಾಮ ಕಾರಿಗೆ ತೀವ್ರ ಹಾನಿಯಾಗಿದ್ದು, ಪ್ರವೀಣ್ ಹಾಗೂ ಅವರ ಪುತ್ರ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.

ಟ್ರಕ್ ಚಾಲಕನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಮೀರತ್ ನ ಮುಲ್ತಾನ್ ನಗರದಲ್ಲಿ ವಾಸಿಸುತ್ತಿರುವ ಪ್ರವೀಣ್ ಆಸ್ಟ್ರೇಲಿಯದಲ್ಲಿ 2008ರಲ್ಲಿ ಭಾರತವು ಎಂಎಸ್ ಧೋನಿ ನೇತೃತ್ವದಲ್ಲಿ ಸಿಬಿ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಪ್ರವೀಣ್ ಭಾರತದ ಪರ 6 ಟೆಸ್ಟ್ , 68 ಏಕದಿನ ಹಾಗೂ 10 ಟಿ-20 ಪಂದ್ಯಗಳನ್ನು ಆಡಿದ್ದಾರೆ. 119 ಐಪಿಎಲ್ ಪಂದ್ಯಗಳಲ್ಲೂ ಆಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News