×
Ad

ಪಕ್ಷದಲ್ಲಿ ಯಾವುದೇ ಆಂತರಿಕ ಸಮಸ್ಯೆಗಳಿಲ್ಲ, ಸಿಎಂ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ: ಎಚ್.ಕೆ. ಪಾಟೀಲ್

Update: 2023-11-04 12:53 IST

Photo: facebook.com/HKPATIL 

ಕೊಪ್ಪಳ: ನಮ್ಮ ಪಕ್ಷದಲ್ಲಿ ಯಾವುದೇ ಆಂತರಿಕ ಸಮಸ್ಯೆಗಳಿಲ್ಲ. ಸಿಎಂ ವಿಚಾರಕ್ಕೆ ಸಂಬಧಿಸಿ ಯಾವುದೇ ಗೊಂದಲ ಇಲ್ಲ. ಮುಖ್ಯಮಂತ್ರಿ ಸ್ಥಾನದ ಕುರಿತು ನಡೆಯುತ್ತಿರುವ ಚರ್ಚೆಗಳು ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಕಾನೂನು ‌ಸಚಿವ ಎಚ್.ಕೆ. ಪಾಟೀಲ ಹೇಳಿದ್ದಾರೆ.

ಶನಿವಾರ ಸುದ್ದಿಗಾರರ ಜೊತೆ ಮಾತಾನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ಮುಖ್ಯಮಂತ್ರಿ ಬದಲಾವಣೆ ವಿಷಯದ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಪಕ್ಷದ ವೇದಿಕೆಯಲ್ಲೇ ಎಲ್ಲವನ್ನೂ ಚರ್ಚೆ ಮಾಡಲು ಅವಕಾಶ ಇದೆ. ಮಾಧ್ಯಮಗಳ ಮುಂದೆ ಯಾವುದೇ ವಿಷಯ ಚರ್ಚೆ ಮಾಡಬಾರದು. ಅವಕಾಶ ಸಿಕ್ಕವರು ಸಿಎಂ ಆಗುತ್ತಾರೆ ಎಂದರು.

ನೀವು ಸಿಎಂ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಹುದ್ದೆಯನ್ನು ಆಸೆ ಪಟ್ಟು ತೆಗೆದುಕೊಳ್ಳುವುದಲ್ಲ. ಅದಕ್ಕೆ ಜನರ ಆಶೀರ್ವಾದವೂ ಬೇಕು. ನಾವು ಬಯಸಿದ ಮಾತ್ರಕ್ಕೆ ಸಿಎಂ ಆಗುವುದಿಲ್ಲ. ಅದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಕೇಂದ್ರದ ನಾಯಕರು ನಿರ್ಧಾರ ಮಾಡಿದವರೇ ಸಿಎಂ ಆಗುತ್ತಾರೆ. 

ಗ್ರಾಮ ನ್ಯಾಯಾಲಯಗಳ ಸ್ಥಾಪನೆಗಳ ಬಗ್ಗೆ ಸಿಜೆ ಬಳಿ‌ ಚರ್ಚಿಸಿದ್ದೇನೆ. ಸಂಪುಟದಲ್ಲಿಯೂ ಒಪ್ಪಿಗೆ ದೊರೆತಿದೆ. ಜನವರಿ 26ರ ಒಳಗೆ ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತೇವೆ. 

ಎಚ್.ಕೆ. ಪಾಟೀಲ್, ಕಾನೂನು ‌ಸಚಿವ 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News