ಒಂದು ದೇಶ ಒಂದು ತೆರಿಗೆ ನೀತಿ: ಮದ್ಯಕ್ಕೆ ಏಕೆ ಅನ್ವಯವಾಗುವುದಿಲ್ಲ?
PC: istockphoto
ಹೊಸದಿಲ್ಲಿ: ಒಂದು ಬಾಟಲಿ ಮದ್ಯಕ್ಕೆ ಗೋವಾದಲ್ಲಿ 100 ರೂಪಾಯಿ ಇದ್ದರೆ, ಪಕ್ಕದ ಕರ್ನಾಟಕದಲ್ಲಿ 305 ರೂಪಾಯಿ. ಅಂತೆಯೇ ತೆಲಂಗಾಣದಲ್ಲಿ 229 ಹಾಗೂ ರಾಜಸ್ಥಾನದಲ್ಲಿ 205 ರೂಪಾಯಿ ಇದೆ!
ರಾಜ್ಯಗಳು ವಿಧಿಸುವ ವಿವಿಧ ಹಂತದ ಅಬ್ಕಾರಿ ಸುಂಕ ಮತ್ತು ಇರರ ತೆರಿಗೆಗಳಿಂದಾಗಿ ಈ ಬದಲಾವಣೆ ಕಂಡುಬಂದಿದೆ. ಗೋವಾ ಅತ್ಯಂತ ಕಡಿಮೆ ತೆರಿಗೆಯನ್ನು ವಿಧಿಸುವ ರಾಜ್ಯವಾಗಿ ಮುಂದುವರಿದಿದಿದೆ. ಕಳೆದ ಕೆಲ ವರ್ಷಗಳಿಂದ ಗೋವಾ ಅತ್ಯಂತ ಕಡಿಮೆ ಅಂದರೆ ಶೇಕಡ 55ರಷ್ಟು ತೆರಿಗೆ ವಿಧಿಸುವ ರಾಜ್ಯವಾಗಿ ಮುಂದುವರಿದಿದ್ದರೆ, ಕರ್ನಾಟಕದಲ್ಲಿ ಈ ಪ್ರಮಾಣ ಶೇಕಡ 80ಕ್ಕೆ ಏರಿದೆ. ಇದು ರಾಜ್ಯದಲ್ಲೇ ಅತ್ಯಧಿಕ ಎನಿಸಿದೆ ಎಂದು ಅಂತಾರಾಷ್ಟ್ರೀಯ ಸ್ಪಿರಿಟ್ಸ್ & ವೈನ್ ಅಸೋಸಿಯೇಶನ್ ಆಫ್ ಇಂಡಿಯಾ ವಿಶ್ಲೇಷಿಸಿದೆ.
ಇದರಿಂದಾಗಿ ಒಂದು ಬಾಟಲಿ ಬ್ಲ್ಕಾಕ್ ಲೇಬಲ್ ವಿಸ್ಕಿಗೆ ದೆಹಲಿಯಲ್ಲಿ 3310 ರೂಪಾಯಿ ಇದ್ದರೆ, ಮುಂಬೈನಲ್ಲಿ ಇದರ ದರ 4200 ರೂಪಾಯಿ ಹಾಗೂ ಕರ್ನಾಟಕದಲ್ಲಿ ಸುಮಾರು 5200 ರೂಪಾಯಿಗಳಾಗಿವೆ.
ಈ ವ್ಯತ್ಯಾಸಗಳು ಒಂದು ದೇಶ ಒಂದು ತೆರಿಗೆ ಎಂಬ ನೀತಿಗೆ ವಿರುದ್ಧವಾಗಿದೆ. ತೆರಿಗೆಗಳನ್ನ ಹೆಚ್ಚು ತಾರ್ಕಿಕಗೊಳಿಸುವಂತೆ ಉದ್ಯಮದಿಂದ ಬೇಡಿಕೆ ಇದ್ದರೂ, ಹಣಕಾಸು ಸಚಿವರು ಈ ಪರಿಸ್ಥಿತಿಯನ್ನು ಸರಿಪಡಿಸಲು ಯಾವುದೇ ಪ್ರಯತ್ನ ಕೈಗೊಂಡಿಲ್ಲ. ಈ ಕಾರಣದಿಂದ ಅಧಿಕ ತೆರಿಗೆ ಇರುವ ರಾಜ್ಯಗಳು ಅಕ್ರಮ ಮದ್ಯ ತಯಾರಿಕೆಯ ಕಾರಣದಿಂದ ಆದಾಯ ಕಳೆದುಕೊಳ್ಳುತ್ತಿವೆ.
ಉದಾಹರಣೆಗೆ ದೆಹಲಿಯ ಜನ ಮದ್ಯ ಖರೀದಿಗೆ ಪಕ್ಕದ ಹರ್ಯಾಣಕ್ಕೆ ತೆರಳಿದರೆ, ತಮಿಳುನಾಡು ಬದಲಾಗಿ ಪುದುಚೇರಿಯಿಂದ ಜನ ಮದ್ಯ ಖರೀದಿಸುತ್ತಾರೆ. ಜಿಎಸ್ ಟಿ ಬಳಿಕ ಮದ್ಯದ ಮೇಲೆ ವಿಧಿಸುವ ಅಬ್ಕಾರಿ ಸುಂಕ ಮತ್ತು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ವಿಧಿಸುವ ಮೌಲ್ಯವರ್ಧಿತ ತೆರಿಗೆ ರಾಜ್ಯಗಳ ಆದಾಯದ ಏಕೈಕ ಮೂಲವಾಗಿದೆ. ವಿಶೇಷವಾಗಿ ಉಚಿತಗಳ ಕಾರಣದಿಂದ ತೆರಿಗೆ ವಿಧಿಸುವ ಅಧಿಕಾರವನ್ನು ಬಿಟ್ಟುಕೊಡಲು ಹಣಕಾಸು ಸಚಿವರುಗಳು ಒಪ್ಪುವುದಿಲ್ಲ. ಕೊರತೆಯನ್ನು ಸರಿದೂಗಿಸಲು ಈ ತೆರಿಗೆಯನ್ನು ಬಳಸಿಕೊಳ್ಳಲಾಗುತ್ತಿದೆ.