ಸಗಮಕುಂಟಾ: ಸ್ಮಶಾನ ಕಾರ್ಮಿಕರಿಗೆ ಸಾಮಾಗ್ರಿ ವಿತರಣೆ
ರಾಯಚೂರು: ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ಬೇಡಿಕೆಯಂತೆ ಸೋಮವಾರ ರಾಯಚೂರು ತಾಲ್ಲೂಕಿನ ಸಗಮಕುಂಟಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಸಾಮಗ್ರಿ ವಿತರಣೆ ಮಾಡಲಾಯಿತು.
ಸಗಮಕುಂಟಾ, ಯರಗುಂಟಾ, ಮಾಮ್ಮಿಡಿದೊಡ್ಡಿ, ಕೋರ್ತಕುಂದಾ, ಕೂರವಿಹಾಳ, ಇಬ್ರಾಹಿಂ ದೊಡ್ಡಿ, ಗ್ರಾಮಗಳ ಸ್ಮಶಾನ ಕಾರ್ಮಿಕರಿಗೆ ಗ್ರಾಮ ಪಂಚಾಯತ್ ಸ್ವಂತ ಅನುದಾನದಲ್ಲಿ ಶವಸಂಸ್ಕಾರಕ್ಕೆ ಬೇಕಾದ ಸಾಮಾಗ್ರಿಗಳು ಮತ್ತು ಹಲಿಗೆ ಬಾರಿಸುವವರಿಗೆ ಹಲಿಗೆ ಹಾಗೂ ಅವರ ಸುರಕ್ಷತೆ ಗಾಗಿ ಕೈ ಗ್ಲೌಸ್, ಬೂಟ್ ಹಾಗೂ ಎರಡು ಕೊಡಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಕರೆಪ್ಪ ಅವರು ಮಾತಾನಾಡಿ, ನಮ್ಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಯರಗುಂಟಾ, ಕೂರವಿಹಾಳ ಗ್ರಾಮಗಳ ಸಾರ್ವಜನಿಕ ಸಶ್ಮಾನಗಳ ಒತ್ತುವರಿ ತೆರುವು ಗೊಳಿಸುವ ಕಾರ್ಯ ಇನ್ನು ಎರಡು ತಿಂಗಳಲ್ಲಿ ಮಾಡುತ್ತೇವೆ. ತಮ್ಮ ಬೇಡಿಕೆಯಂತೆ ಮಾಮ್ಮಿಡಿ ದೊಡ್ಡಿ ಗ್ರಾಮದ ಸಶ್ಮಾನದಲ್ಲಿ ರೂಮ್ ನಿರ್ಮಾಣ ಮಾಡಲಾಗಿದೆ. ನೀರಿನ ವ್ಯವಸ್ಥೆ ಆದಷ್ಟು ಬೇಗ ಕಲ್ಪಿಸುತ್ತೇವೆ. ಅದೇ ರೀತಿ ಮುಂದಿನ ವರ್ಷ ಪಂಚಾಯತ್‌ನ ಆರ್ಥಿಕ ಪರಿಸ್ಥಿತಿ ಆದಾರಮೇಲೆ ಉಳಿದ ಹಳ್ಳಿಗಳ ಎಲ್ಲಾ ಸಶ್ಮಾನಗಳಲ್ಲಿ ರೂಮ್ ಮತ್ತು ನೀರಿನ ಸೌಲಭ್ಯ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾರ್ವತಮ್ಮ, ಉಪಾಧ್ಯಕ್ಷರಾದ ರಾಮಪ್ಪ ನಾಯಕ ಹಾಗೂ ಪಂಚಾಯತ ಕಾರ್ಯದರ್ಶಿ ಗೋಪಾಲಯ್ಯ ಎಲ್ಲಾ ಗ್ರಾಮಗಳ ಗ್ರಾಮ ಪಂಚಾಯತಿ ಸದಸ್ಯರುಗಳು ಮಸಣ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕರಾದ ಕೆ.ಜಿ.ವಿರೇಶ ಮತ್ತು ಪಂಚಾಯತ ಮಟ್ಟದ ಸಮಿತಿಯ ಅಧ್ಯಕ್ಷ ರಂಗಪ್ಪ ಕುರತಕುಂದಾ,ಕಾರ್ಯದರ್ಶಿ ನಾಗಪ್ಪ ಮಾಮಿಡಿ ದೊಡ್ಡಿ ಸೇರಿದಂತೆ ಎಲ್ಲಾ ಗ್ರಾಮಗಳ ಸಶ್ಮಾನ ಕಾರ್ಮಿಕರು ಭಾಗವಹಿಸಿದ್ದರು.