×
Ad

ಸಿಂಧನೂರು | ಉಮ್ರಾ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ

ಧಾರ್ಮಿಕ ಪುಣ್ಯಕ್ಷೇತ್ರ ದರ್ಶನದಿಂದ ಮಾನಸಿಕ ನೆಮ್ಮದಿ : ಬಾಬುಗೌಡ ಬಾದರ್ಲಿ

Update: 2025-12-29 22:12 IST

ಸಿಂಧನೂರು : ಧಾರ್ಮಿಕ ಪುಣ್ಯಕ್ಷೇತ್ರಗಳ ದರ್ಶನದಿಂದ ಮಾನಸಿಕ ನೆಮ್ಮದಿ ದೊರೆಯುವುದರ ಜೊತೆಗೆ ಶಾಂತಿ, ಸಾಮರಸ್ಯದ ಭಾವನೆ ಮೂಡುತ್ತದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ ಅಭಿಪ್ರಾಯಪಟ್ಟರು.

ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಉಮ್ರಾ ಪ್ರವಾಸದ ಯಾತ್ರಾರ್ಥಿಗಳಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೆಕ್ಕಾ, ಮದೀನಾ ಇಸ್ಲಾಂ ಧರ್ಮದ ಪವಿತ್ರ ಪುಣ್ಯಕ್ಷೇತ್ರಗಳಾಗಿವೆ. ಅಲ್ಲಿನ ಸ್ಥಳಗಳು ಆಯಾ ಧರ್ಮದ ಅನುಯಾಯಿಗಳಿಗೆ ಆಳವಾದ ಆಧ್ಯಾತ್ಮಿಕ ಅರ್ಥ, ಶಾಂತಿ ಮತ್ತು ನಂಬಿಕೆಯನ್ನು ಒದಗಿಸುತ್ತದೆ ಎಂದರು.

ಜಿಲ್ಲಾ ಕೆಡಿಪಿ ಸದಸ್ಯ ಶಫೀವುಲ್ಲಾಖಾನ್ ಮಾತನಾಡಿದರು.

ನಂತರ ಮೌಲಾನಾ ಅಜರುದ್ದೀನ್ ರಬ್ಬನಾ ನೇತೃತ್ವದಲ್ಲಿ ಸಿಂಧನೂರು ತಾಲ್ಲೂಕಿನ 70 ಜನರು ಉಮ್ರಾ ಪ್ರವಾಸ ಕೈಗೊಂಡರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರಾಜುಗೌಡ ಬಾದರ್ಲಿ, ಎಂ.ಲಿಂಗಪ್ಪ ದಢೇಸೂಗುರು, ಎನ್.ಅಮರೇಶ, ಖಾಜಿಮಲಿಕ್ ವಕೀಲ, ಸೈಯದ್ ಹಾರೂನ್‍ಪಾಷಾ ಜಾಹಗೀರ್‍ದಾರ್, ಶಬ್ಬೀರ್ ಅಹ್ಮದ್ ನಾಯಕ ಸೇರಿದಂತೆ ಉಮ್ರಾ ಯಾತ್ರಾರ್ಥಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News