ರಾಯಚೂರು | ಜ.12ರಿಂದ 14 ರವರೆಗೆ ಹಾಲುಮತ ಸಾಹಿತ್ಯ ಸಮ್ಮೇಳನ : ಸಿದ್ದರಮಾನಂದಪುರಿ
ರಾಯಚೂರು : ತಿಂಥಿಣಿ ಬ್ರಿಜ್‍ನ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ ಜ.12 ರಿಂದ 14 ರವರೆಗೆ ಹಾಲುಮತ ಸಾಹಿತ್ಯ ಸಮ್ಮೇಳನ ಮತ್ತು ಪೂಜಾರಿಗಳಿಗೆ ತರರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಗುರುಪೀಠದ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮೀಜಿ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಪ್ರತಿಬಾರಿಯಂತೆ ಹಾಲುಮತ ಸಂಸ್ಕೃತಿ ವೈಭವದ ಆಚರಣೆ ರಾಜಕೀಯೇತರವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಮೂರು ದಿನಗಳ ಕಾಲ ವಿಧ್ವಾಂಸರು, ಸಂಶೋದಕರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಹಾಲುಮತದ ಪಂಥ ವಿಷಯದ ಕುರಿತು ಹೈದರಾಬಾದ್ ನ ವಿಧ್ವಾಂಸರು ಉಪನ್ಯಾಸ ನೀಡಲಿದ್ದಾರೆ. ಎರಡನೇ ದಿನ ಜ.13ರಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ದ್ವಾಕರನಾಥ ಹಾಗೂ 14 ರಂದು ಕನ್ನಡ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಉಪನ್ಯಾಸ ನೀಡಲಿದ್ದಾರೆ. ಸಿದ್ದ ಪರಂಪರೆ, ಬಹುಜನರ ಸಂಸ್ಕೃತಿಗಳ ಅಸ್ತಿತ್ವ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ನಾಡಿನ ವಿವಿಧಡೆಯಿಂದ ಅನೇಕರು ಆಗಮಿಸಲಿದ್ದಾರೆ ಎಂದರು.
ಅಲ್ಲದೇ ಫೆ.15ರ ಶಿವರಾತ್ರಿ ಅಂಗವಾಗಿ ಸಾಮೂಹಿಕ ವಿವಾಹಕಾರ್ಯಕ್ರಮ ಆಯೋಜಿಸಲಾಗಿದೆ. 1,108 ಶಿವಲಿಂಗಗಳನ್ನು 1,108 ದಂಪತಿಗಳಿಂದ ಪೂಜಿಸುವ ಕಾರ್ಯಕ್ರಮ, ರಾತ್ರಿಯಡಿ ಹೆಸರಾಂತ ಕಲಾತಂಡಗಳಿಂದ ಭಕ್ತಿ ಸಂಗೀತ, ನೃತ್ಯ ,ನಾಟಕಗಳ ಪ್ರದರ್ಶನ ನಡೆಯಲಿದೆ. ಪ್ರತಿವರ್ಷದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ತಾತಗಾಣಧಾಳ, ಮಹಾದೇವಪ್ಪ ಮಿರ್ಜಾಪುರು, ಹನುಮಂತಪ್ಪ ಜಾಲಿಬೆಂಚಿ, ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಗುಂಡಪ್ಪ ಸಾಹುಕಾರ, ನಾಗರಾಜ ಮಡ್ಡಿಪೇಟೆ, ಯಶವಂತ, ಶೇಖರ ವಾರದ, ಹನುಮಂತಪ್ಪ, ಬಸಯ್ಯ ಸಾಹುಕಾರಿದ್ದರು.