ಆಳಂದ | ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ತಾಲ್ಲೂಕು ಸಮ್ಮೇಳನ
ಕಲಬುರಗಿ: ಆಳಂದ್ ಪಟ್ಟಣದ ಪೊಲೀಸ್ ಠಾಣೆಯ ಬಳಿಯ ಶಾಹಿದ್ ಫಂಕ್ಷನ್ ಹಾಲ್‍ನಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ಆಳಂದ ತಾಲ್ಲೂಕು ಸಮ್ಮೇಳನ ನಡೆಯಿತು.
ಸಿಪಿಐ ರಾಜ್ಯ ಕಾರ್ಯದರ್ಶಿ ಕಾ.ಬಿ.ಅಮ್ಜದ್ ಅವರು ಸಮ್ಮೇಳನವನ್ನು ಉದ್ಘಾಟಿಸಿ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಿಪಿಐನ ಪಾತ್ರವನ್ನು ಶ್ಲಾಘಿಸಿದ ಅವರು, "ಸಿಪಿಐ ಭಾರತದ ಸ್ವತಂತ್ರ್ಯ ಪೂರ್ವದ ಪ್ರಥಮ ರಾಜಕೀಯ ಪಕ್ಷವಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿತು. ನಮ್ಮ ಬಾವುಟ ಕೆಂಪು, ಏಕತೆ ಮತ್ತು ಶೋಷಣೆ ವಿರುದ್ಧದ ಹೋರಾಟದ ಸಂಕೇತವಾಗಿದೆ" ಎಂದು ಹೇಳಿದರು.
ಬಂಡವಾಳಶಾಹಿ ಧೋರಣೆಗಳು ಬಡವರನ್ನು, ರೈತರನ್ನು ಶೋಷಣೆಗೊಳಪಡಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿಯಂತಹ ಪಕ್ಷಗಳು ಸಂವಿಧಾನಕ್ಕೆ ಧಕ್ಕೆ ತರುವಂತಹ ಕೆಲಸಗಳನ್ನು ಮಾಡುತ್ತಿವೆ ಎಂದು ಟೀಕಿಸಿದರು.
ಸಿಪಿಐ ಪಕ್ಷದ ರಾಜ್ಯ ಮಂಡಳಿಯ ಕಾರ್ಯದರ್ಶಿ ಮೌಲಾ ಮುಲ್ಲಾ, ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ, ಪ್ರಭುದೇವ ಯಳಸಂಗಿ, ಕಿಸಾನಸಭಾ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ ಹಿರಿಯ ಪದ್ಮಾಕರ ಜಾನಿಬ್ ಅವರು ಸಮ್ಮೇಳನ ಉದ್ದೇಶಿಸಿ ಮಾತನಾಡಿ, ಶ್ರಮಿಕರ ಧ್ವನಿಯನ್ನು ಎತ್ತಿ ಹಿಡಿದು ನ್ಯಾಯಕ್ಕಾಗಿ ಹೋರಾಡುವ ಮೂಲಕ ಪಕ್ಷದ ಸಂಘಟನೆಗೆ ಒಗ್ಗೂಡಬೇಕು ಎಂದರು.
ಪಕ್ಷದ ತಾಲೂಕು ಕಾರ್ಯದರ್ಶಿ ಮೈಲಾರಿ ಜೋಗೆ ಅಧ್ಯಕ್ಷತೆ ವಹಿಸಿದ್ದರು. ಕಿಸಾನಸಭಾ ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ, ಧರ್ಮರಾಜ ಕೊರಳ್ಳಿ, ನ್ಯಾಯವಾದಿ ಪಂಡಿತ ಸಲಗರೆ, ರಾಜಶೇಖರ ಬಸ್ಮೆ, ಕಲ್ಯಾಣಿ ಅವುಟೆ, ಸಾಯಬಣ್ಣಾ ಪೂಜಾರಿ, ಜಗನಾಥ ಗುಂಡಗುರತಿ ಬಟ್ಟರಗಾ, ಶಿರಾಜ ಖಾಜಿ, ಅಸ್ಪಾಕ್ ಮುಲ್ಲಾ, ರಝಾಕ್ ಆಳಂದ, ವಿಜಯಲಕ್ಷ್ಮೀ ಪಿ.ಯಸಳಂಗಿ, ಮಹಾನಂದ ತುಕಾಣೆ, ರೇಷ್ಮಾ ಶುಕ್ರವಾಡಿ ಸೇರಿದಂತೆ ವಿವಿಧ ಗ್ರಾಮಗಳಿಂದ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು. ಕಲ್ಯಾಣಿ ತುಕಾಣಿ ನಿರೂಪಿಸಿದರು.