×
Ad

ಹವಾಮಾನ ವೈಪರೀತ್ಯ: ಸಿಎಂ ರಾಯಚೂರು ಪ್ರವಾಸ ರದ್ದು

CM's visit to raichur cancelled

Update: 2025-08-05 23:30 IST

ರಾಯಚೂರು: ನಾಳೆ ನಡೆಯಬೇಕಿದ್ದ ಜಿಲ್ಲೆಯ ಲಿಂಗಸುಗುರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಗಣಿ ಕಾರ್ಮಿಕರ ಸಮುಚ್ಚಯ ಅಡಿಗಲ್ಲು ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮvu ಹವಾಮಾನ ವೈಪರೀತ್ಯದಿಂದ ರದ್ದಾಗಿದೆ.

ಸುಮಾರು 998 ರೂ. ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಸೇರಿದಂತೆ ವಿವಿಧ ಇಲಾಖೆಯ ಸಚಿವರು ಹಾಗೂ ಗಣ್ಯರು ಆಗಮಿಸಬೇಕಿತ್ತು. ಆದರೆ ಹಟ್ಟಿ ಪಟ್ಟಣದಲ್ಲಿ ಸಂಜೆ 5:30 ರಿಂದ ರಾತ್ರಿ 7 ಗಂಟೆಯವರೆಗೆ ಸತತ ಮಳೆ ಸುರಿದಿದೆ ಹಾಗೂ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯಲ್ಲಿ ಮುಂದಿನ 5 ದಿನ ಮಳೆ ಸುರಿಯಲಿದ್ದು ಹವಾಮಾನ ಇಲಾಖೆಯಿಂದ ಎಲ್ಲೋ ಅಲೆರ್ಟ್ ಎಂದು ಘೋಷಿಸಲಾಗಿದೆ ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರ ಕೊಪ್ಪಳ ಹಾಗೂ ರಾಯಚೂರಿನಲ್ಲಿ ಜಿಲ್ಲಾ ಪ್ರವಾಸ ರದ್ದು ಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಅವರ ವಿಶೇಷ ಕರ್ತವ್ಯಾಧಿಕಾರಿ ಕೆ.ಚಿರಂಜೀವಿ ಅವರು ಪ್ರಕಟಣೆ ಮೂಲಕ ತಿಳಿಸಿದ್ದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News