×
Ad

ರಾಯಚೂರು| ಬಳಗಾನೂರು ಪಟ್ಟಣ ಪಂಚಾಯಿತಿ ಜನವಿರೋಧಿ ನಡೆ ಖಂಡಿಸಿ ಪ್ರತಿಭಟನೆ

Update: 2025-12-15 20:28 IST

ರಾಯಚೂರು: ಮಸ್ಕಿ ತಾಲೂಕಿನ ಬಳಗಾನೂರು ಪಟ್ಟಣ ಪಂಚಾಯಿತಿ ಆಡಳಿತದ ನಿರ್ಲಕ್ಷ್ಯ, ಭ್ರಷ್ಟಾಚಾರ ಮತ್ತು ಜನವಿರೋಧಿ ನಡೆಯ ವಿರುದ್ದ ಅಖಿಲ ಭಾರತ ಕಿಸಾನ್ ಸಭಾ ಮಸ್ಕಿ ತಾಲೂಕು ಘಟಕದ ವತಿಯಿಂದ ಸೋಮವಾರ ಬೆಳಿಗ್ಗೆ ಮಸ್ಕಿಯ ಡಾ.ಬಿ.ಆರ್.ಅಂಬೇಡ್ಕರ್‌ ಪುತ್ತಳಿಯ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಿಪಿಐಎಂಎಲ್ ರೆಡ್ ಸ್ಟಾರ್ ರಾಜ್ಯಸಮಿತಿ ಸದಸ್ಯ ಎಂ.ಗಂಗಾಧರ್ ಬುದ್ದಿನ್ನಿ, ಬಳಗಾನೂರು ಪಟ್ಟಣ ಪಂಚಾಯಿತಿ ಅವ್ಯವಸ್ಥೆಯ ಆಗರವಾಗಿದೆ. ಸರ್ವೆ ನಂಬರ್ 509ರ ಜಮೀನಿನಲ್ಲಿ ಹಲವಾರು ಕುಟುಂಬಗಳು ವಾಸಮಾಡುತ್ತಿದ್ದಾರೆ. ಆದರೆ ಖಾಸಗಿ ವ್ಯಕ್ತಿಗಳು ಪಶ್ಚಿಮಕ್ಕಿರುವ ಐದು ಅಡಿ ರಸ್ತೆಯನ್ನು ವಿನಾಕಾರಣ ಬಂದ್ ಮಾಡಿ ನಿವಾಸಿಗಳ ಓಡಾಟಕ್ಕೆ ತೊಂದರೆ ನೀಡುತ್ತಿದ್ದಾರೆ. ಇದನ್ನು ಕೂಡಲೇ ಸ್ಥಳ ಪರಿಶೀಲನೆ ಮಾಡಿ ಸರಿಪಡಿಸಬೇಕು. ಬಸವೇಶ್ವರ ನಗರದಲ್ಲಿ ಅಂಬೇಡ್ಕರ್ ಭವನವನ್ನು ನಿರ್ಮಿಸಬೇಕು ಹಾಗೂ ಹೈಟೆಕ್ ಶೌಚಾಲಯ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಪರಿಸರ, ಜನ, ಜಾನುವಾರುಗಳಿಗೆ ಕಂಟಕವಾಗಿರುವ ಬುದ್ದಿನ್ನಿ ಮತ್ತು ಜಾಲವಾಡಗಿಯಲ್ಲಿನ ಅಕ್ರಮ ಮರಳು ಗಣಿಗಾರಿಕೆ ತಡೆಯಬೇಕು. ಬಯಲು ಶೌಚಾಲಯ ಮುಕ್ತ ಮಾಡಬೇಕು. ಇಲ್ಲವಾದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.  

ಈ ವೇಳೆ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಾರುತಿ ಜಿನ್ನಾಪೂರು, ಹೋರಾಟಗಾರ ಬಸವರಾಜ ಎಕ್ಕಿ, ಕರ್ನಾಟಕ ರೈತಸಂಘದ ಮಸ್ಕಿ ತಾಲೂಕು ಘಟಕದ ಅಧ್ಯಕ್ಷ ಸಂತೋಷ್‌ ಹಿರೇದಿನ್ನಿ, ತಾಲೂಕಾ ಕಾರ್ಯದರ್ಶಿ ವೆಂಕಟೇಶ್‌ ನಾಯಕ್‌, ಹುಲಿಗೆಪ್ಪ, ಶಾಂತಮೂರ್ತಿ, ಮರಿಯಪ್ಪ, ದುರುಗಪ್ಪ, ಶರಣಪ್ಪ, ಶಿವಣ್ಣ, ಹನುಮಂತ, ಹುಚ್ಚಪ್ಪ, ಯಂಕಪ್ಪ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News