ರಾಯಚೂರು: ಮಂತ್ರಾಲಯ ಮಠದಲ್ಲಿ ಕುಡಿಯುವ ನೀರಿನ ಸಂಗ್ರಹ ಜಲಾಶಯ ನಿರ್ಮಾಣಕ್ಕೆ ಶೀಲಾನ್ಯಾಸ
ರಾಯಚೂರು: ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಕುಡಿಯುವ ನೀರಿನ ಸಂಗ್ರಹ ಜಲಾಶಯ ನಿರ್ಮಾಣ ಕಾಮಗಾರಿಗೆ ಗುರುವಾರ ಶೀಲಾನ್ಯಾಸ ನೆರವೇರಿತು.
ಕಾರ್ಯಕ್ರಮವು ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಎಚ್‍ಎಎಲ್‍ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ರವಿ ಕೆ., ಸಂಸ್ಥೆಯ ಹಿರಿಯ ಅಧಿಕಾರಿಗಳು, ಶ್ರೀಮಠದ ಅಧಿಕಾರಿಗಳು, ಭಕ್ತರು ಹಾಗೂ ಗಣ್ಯರು ಭಾಗವಹಿಸಿದ್ದರು.
ಸುಮಾರು 50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಎಚ್‍ಎಎಲ್ ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‍ಆರ್) ಯೋಜನೆಯಡಿ ಕೈಗೆತ್ತಿಕೊಂಡಿದೆ. ಯೋಜನೆ ಪೂರ್ಣಗೊಂಡ ಬಳಿಕ ಮಂತ್ರಾಲಯದ ಭಕ್ತರು ಹಾಗೂ ಸ್ಥಳೀಯ ನಿವಾಸಿಗಳ ಕುಡಿಯುವ ನೀರಿನ ಅಗತ್ಯಗಳಿಗೆ ಶಾಶ್ವತ ಮತ್ತು ದೀರ್ಘಕಾಲೀನ ಪರಿಹಾರ ದೊರೆಯಲಿದೆ.
ಜಲಾಶಯ ನಿರ್ಮಾಣದಿಂದ ನೀರಿನ ಸಂಗ್ರಹಣೆ ಮತ್ತು ಪೂರೈಕೆ ವ್ಯವಸ್ಥೆ ಮತ್ತಷ್ಟು ಬಲವಾಗಲಿದ್ದು, ಭವಿಷ್ಯದಲ್ಲಿಯೂ ನೀರಿನ ಕೊರತೆಯನ್ನು ಸಮರ್ಥವಾಗಿ ಎದುರಿಸಲು ಸಹಕಾರಿಯಾಗಲಿದೆ.
ಈ ಸಂದರ್ಭದಲ್ಲಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳು ಯೋಜನೆ ಯಶಸ್ವಿಯಾಗಲೆಂದು ಆಶೀರ್ವದಿಸಿ, ಇಂತಹ ಐತಿಹಾಸಿಕ ಯೋಜನೆಗೆ ಉದಾರ ಸಹಾಯ ನೀಡುತ್ತಿರುವ ಎಚ್‍ಎಎಲ್ ಸಂಸ್ಥೆ ಕಾರ್ಯದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.