×
Ad

Lingsugur | ತಮ್ಮನಿಂದಲೇ ಅಣ್ಣನ ಕೊಲೆ

Update: 2026-05-17 12:43 IST

 ಶ್ರೀಧರ (27)

ಲಿಂಗಸುಗೂರು : ಪಟ್ಟಣದ ಬಸವಸಾಗರ ಕ್ರಾಸ್ ಹತ್ತಿರದ ಸಿದ್ದರಾಮೇಶ್ವರ ಶಾಲೆ ಬಳಿ ತಮ್ಮ ತನ್ನ ಅಣ್ಣನನ್ನು ಮಲಗಿರುವಾಗ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಶನಿವಾರ ಸಂಜೆ ನಡೆದಿದೆ.

ಬಸವರಾಜ ವಾಸದೇವ (32) ಕೊಲೆಯಾದ ವ್ಯಕ್ತಿ.

ಬಸವರಾಜ ಕುಡಿದು ಬಂದು ತನ್ನ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನು ಎನ್ನಲಾಗಿದೆ. ಈ ವಿಚಾರವಾಗಿ ಬೇಸರಗೊಂಡ ಆತನ ತಮ್ಮ ಶ್ರೀಧರ (27) ಕೊಲೆ ಮಾಡಿರುವುದಾಗಿ ಆತನ ತಂದೆ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News