ಮಲ್ಲಿಕಾರ್ಜುನ ಖರ್ಗೆ ಜನ್ಮದಿನಾಚರಣೆ: ದೇವದುರ್ಗ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ
ರಾಯಚೂರು: ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಹುಟ್ಟು ಹಬ್ಬವನ್ನು ಮಂಗಳವಾರ ಅರಕೇರ, ದೇವದುರ್ಗ ತಾಲೂಕು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ದೇವದುರ್ಗದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಒಳ ಮತ್ತು ಹೊರ ರೋಗಿಗಳಿಗೆ ಬ್ರೇಡ್, ಹಣ್ಣು ಹಂಪಲಗಳನ್ನು ಉಚಿತವಾಗಿ ವಿತರಣೆ ಮಾಡುವ ಮೂಲಕ ಆಚರಿಸಿದರು.
ಆಸ್ಪತ್ರೆ ಆವರಣದಲ್ಲಿ ದೇವದುರ್ಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಗೌಡ ಬಕ್ರಿ ಗೌರಂಪೇಟ್ ಸಂದರ್ಭೋಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಖಾಜಾಹುಸೇನ್, ಈರಪ್ಪ ಮಜ್ಗಿ, ಸಾಬಗೌಡ ನಾಯಕ, ವೆಂಕಟೇಶ ನಾಯಕ, ಹನುಂತ್ರಾಯ, ಬಸವರಾಜ ಹೆಂಬೆರಾಳ, ಚಂದ್ರಕಾಂತ, ಅರಕೇರ, ದೇವದುರ್ಗ ತಾಲೂಕಿನ ಪದಾಧಿಕಾರಕಿಗಳಾದ ಬಾಬುಬುವಾಜಿ, ಲಿಂಗಣ್ಣ ನಾಯಕ, ಅಭಿಶೇಕ್ ಪೂಜಾರಿ, ಕುಮಾರ ನಾಯಕ ರಾಠೋಡ, ದಸ್ತಗೀರಸಾಬ ಕೊತ್ತದೊಡ್ಡಿ, ರಂಗಪ್ಪ ನಾಯಕ ಗೋಸಲ್, ಪಿಡ್ಡಪ್ಪ ನಾಯಕ, ರಂಗಣ್ಣ ನಾಯಕ, ಬಸನಗೌಡ ಅರಷಿಣಿಗಿ, ಖಾಜಾ ಹುಸೇನ ಗೌರಂಪೇಟ್, ಗೌಸ್ ಸಾಬ ಜಾಫ್ರೀ, ಸೇರಿದಂತೆ ಅನೇಕರಿದ್ದರು.