ರಾಯಚೂರು | ಮೊಹರಂ ಆಚರಣೆ ವೇಳೆ ಅಗ್ನಿ ಕುಂಡಕ್ಕೆ ಬಿದ್ದ ವ್ಯಕ್ತಿ; ಗಂಭೀರ ಗಾಯ
Update: 2025-07-05 23:32 IST
ಲಿಂಗಸುಗೂರು(ರಾಯಚೂರು) ಮೊಹರಂ ಆಚರಣೆ ವೇಳೆ ಅಲಾಯಿ ಕುಣಿ(ಅಗ್ನಿ ಕುಂಡ)ಯಲ್ಲಿನ ಬೆಂಕಿಗೆ ವ್ಯಕ್ತಿಯೊಬ್ಬರು ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಲಿಂಗಸುಗೂರು ತಾಲ್ಲೂಕಿನ ಯರಗುಂಟಿ ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡ ವ್ಯಕ್ತಿ ಹನುಮಂತ (40) ಎಂದು ಗುರುತಿಸಲಾಗಿದೆ. ಅಲಾಯಿ ನೃತ್ಯ ಮಾಡುತ್ತಿರುವ ಆಯತಪ್ಪಿ ಕುಣಿಯಲ್ಲಿನ ಬೆಂಕಿಗೆ ಬಿದ್ದಿದ್ದಾರೆ. ಅಲ್ಲಿಯೇ ಇದ್ದ ಜನರು ಅವರನ್ನು ಬೆಂಕಿಯಿಂದ ಹೊರಗಡೆ ಎಳೆದಿದ್ದಾರೆ.
ಸುಟ್ಟಗಾಯಗಳಿಂದ ಗಂಭೀರವಾಗಿ ಗಾಯಗೊಂಡ ಹನುಮಂತ ಅವರನ್ನು ಲಿಂಗಸುಗೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈಗ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.