Manvi | ಕೆಳಭಾಗದ ರೈತರಿಗೆ ನೀರು ಹರಿಸಲು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಆಗ್ರಹ
ಮಾನ್ವಿ: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಮೈಲ್ 71 ಹಾಗೂ 66ರ ಕವಿತಾಳ ಸಮೀಪದ ಕಾಲುವೆಗೆ ಮಾನ್ವಿ ಕ್ಷೇತ್ರದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ, ಕೆಳಭಾಗದ ರೈತರಿಗೆ ಸಮರ್ಪಕವಾಗಿ ನೀರು ಹರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗದ ಸಿರವಾರ ಹಾಗೂ ಮಾನ್ವಿ ತಾಲೂಕಿನ ರೈತರು ಮಳೆಯ ಕೊರತೆಯಿಂದಾಗಿ ಈಗಾಗಲೇ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಐಸಿಸಿ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನದಂತೆ ಕೆಳಭಾಗದ ರೈತರಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಕೆಳಭಾಗದ ರೈತರಿಗೆ ನೀರು ಹರಿಸದೆ ಸರ್ಕಾರ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ, ರೈತರೊಂದಿಗೆ ಸೇರಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರಾಜಾ ವೆಂಕಟಪ್ಪ ನಾಯಕ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಯುವ ಘಟಕದ ಉಪಾ ಧ್ಯಕ್ಷರಾದ ರಾಜಾ ರಾಮಚಂದ್ರ ನಾಯಕ, ಸಿರವಾರ ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ ಬಲ್ಲಟಗಿ, ಕಾರ್ಯನಿರ್ವಾಹಕ ಅಭಿಯಂತರರಾದ ಕೋದಂಡ ರಾಮಯ್ಯ, ಶರಣಪ್ಪ ಗೌಡ ಮದ್ಲಾಪುರ, ಹನುಮಂತ ಬುಳ್ಳಾಪುರ, ಖಾಜಾಪಾಷ ಕವಿತಾಳ, ರುಕ್ಕುಮುದ್ದೀನ್ ಕವಿತಾಳ, ಸಣ್ಣ ಕಿರಿಲಿಂಗಪ್ಪ, ಶಶಿ ಸಾಹುಕಾರ, ಮುಸ್ತಫಾ ಒಂಟಿಬಂಡಿ, ರಾಜಶೇಖರ ಸಾಹುಕಾರ, ಶ್ರೀಕಾಂತ್ ಭೋವಿ, ರಾಮಚಾರಿ ಜಾಲಾಪೂರ, ಶರಣಗೌಡ ಗವಿಗಟ್ಟ, ದಾನಪ್ಪ ಸಿರವಾರ, ರಂಜಿತಾ ಕುಮಾರ್, ಲಕ್ಷ್ಮಣ ಸಿರವಾರ, ಸೂಗೂರಯ್ಯ ಸ್ವಾಮಿ ಗಣದಿನ್ನಿ, ಗೋಪಾಲ ನಾಯಕ ಹರವಿ, ಬಸನಗೌಡ ಬೆಟ್ಟದೂರು, ಲಕ್ಷಣ ಯಾದವ, ಶಿವುರಾಮ ರೆಡ್ಡಿ, ಜಯಕುಮಾರ ಮಾನವಿ, ಮಲ್ಲನಗೌಡ, ವಿಜಯ್, ಅಪ್ಪು ಸೇರಿದಂತೆ ರೈತ ಮುಖಂಡರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.