Raichur | ‘ವಂದೇ ಮಾತರಂ’ಗೆ ಅಗೌರವ ಆರೋಪ: ಸೋನಿಯಾ ಗಾಂಧಿ, ರಾಹುಲ್ ವಿರುದ್ಧ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ
ರಾಯಚೂರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಯುವ ನಾಯಕ ರಾಹುಲ್ ಗಾಂಧಿ ಅವರು ಧ್ವಜಾರೋಹಣದ ವೇಳೆ ‘ವಂದೇ ಮಾತರಂ’ ಗೀತೆಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಸಂಜೆ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಆಗಸ್ಟ್ 15ರಂದು ನವದೆಹಲಿಯ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಧ್ವಜಾರೋಹಣ ನೆರವೇರಿಸಿದ್ದರು. ಈ ಸಂದರ್ಭದಲ್ಲಿ ‘ವಂದೇ ಮಾತರಂ’ ಗೀತೆ ಹಾಡುವ ವೇಳೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಅಗೌರವ ತೋರಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಮುಖಂಡರು ಆರೋಪಿಸಿದರು.
ದೇಶಭಕ್ತಿ ಗೀತೆಗೆ ಗೌರವ ನೀಡದ ನಾಯಕರು ದೇಶದ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಎನ್.ವಿನಾಯಕ್ ರಾವ್, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ರಾಜಕುಮಾರ್ ,RDA ಮಾಜಿ ಅಧ್ಯಕ್ಷರಾದ ಆಂಜನೇಯ ಕಡಗೊಳ್ ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ , ರವೀಂದ್ರ ಜಲ್ದಾರ್,ಸಂತೋಷ್ ರಾಜ್ ಗುರು,ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಎನ್ ವಿನಾಯಕ್ ರಾವ್ , ನಗರ ಮಂಡಲ ಅಧ್ಯಕ್ಷರಾದ ಉಪ್ಪಿಟ್ ರಾಜಶೇಖರ್ ರೆಡ್ಡಿ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರವಿ ಗೌಡ, ಎನ್ ಕಾರ್ತಿಕ್ ರೆಡ್ಡಿ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಜೆ ಎಂ ಮೊನೇಶ್, ಮುಖಂಡರಾದ ಶಿವಕುಮಾರ್ ಪೊಲೀಸ್ ಪಾಟೀಲ್, ವಿಜಯ್ ಕುಮಾರ್ ಸಜ್ಜನ್, ರಾಘವೇಂದ್ರ ರೆಡ್ಡಿ, ಸುರೇಶ್ ಬಾಬು, ಶ್ರೀಕಾಂತ್ ಚೀಕ್ಕಿ, ವೀರೇಶ್ ನಾಯಕ್, ಶ್ರೀಪಾಲ್ ಕೊಠಾರಿ, ಕಾರ್ತಿಕ್ ಯಾದವ್, ವೀರೇಶ್ ತಲ್ವಾರ್, ವೆಂಕಟೇಶ್ ಮಡಿವಾಳ, ಸಿದ್ದರಾಮ, ವಿಜಯರಾಜ, ಲಕ್ಷ್ಮಣ್ ಕುಮಾರ್, ನರೇಶ್, ಮಹೇಶ್ ನಾಯಕ್, ಪ್ರಕಾಶ್, ಮುತ್ತು, ಲಿಂಗರಾಜು, ವೆಂಕಟೇಶ್ ಉಪ್ಪಾರ್, ಶಶಾಂಕ್ ರೆಡ್ಡಿ ಭಾಗವಹಿಸಿದ್ದರು.