ರಾಯಚೂರು | ಟೆಕ್ಸ್ ಕಾನ್ ಕಾರ್ಖಾನೆಯ ಧೂಳು ಮಿಶ್ರಿತ ಹೊಗೆಯಿಂದ ಬೆಳೆಹಾನಿ; ದಲಿತ ಸೇನೆಯಿಂದ ಜಿಲ್ಲಾಡಳಿಕ್ಕೆ ದೂರು

Update: 2026-08-20 21:27 IST

ರಾಯಚೂರು: ರಾಯಚೂರು ಗ್ರೋತ್ ಸೆಂಟರ್ ನ ವಡ್ಲೂರು ಸೀಮಾಂತರದಲ್ಲಿನ ಟೆಕ್ಸ್ ಕಾನ್ ಸ್ಟೀಲ್ ಲಿಮಿಟೆಡ್ ಕಾರ್ಖಾನೆಯ ಧೂಳು ಮಿಶ್ರಿತ ಹೊಗೆಯಿಂದ ಹತ್ತಿ‌ಬೆಳೆಗೆ ಹಾನಿಯಾಗಿದ್ದು ಕಾರ್ಖಾನೆಯ ಮಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸೇನೆ ಜಿಲ್ಲಾ ಸಮಿತಿಯಿಂದ ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಟೆಕ್ಸ್ ಕಾನ್ ಕಾರ್ಖಾನೆಯಿಂದ ತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ, ಇದರಿಂದ ಸುತ್ತಮುತ್ತಲಿನ ರೈತರ ಬೆಳೆಗಳಿಗೆ ಹಾನಿಯಾಗುತ್ತಿದ್ದು ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಅಲ್ಲದೇ ಕಾರ್ಖಾನೆಗೆ ಪೂರೈಸುವ ಕಲ್ಲಿದ್ದಲು ರೈಲ್ವೆ ಟ್ರ್ಯಾಕ್ ಹತ್ತಿರ ಡಂಪ್ ಮಾಡಿ ಕಾನೂನು ಬಾಹಿರವಾಗಿ ಟಿಪ್ಪರ್ ನಲ್ಲಿ ಸಾಗಿಸಲಾಗುತ್ತದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಕಮ್ತೋಳ್, ವಿ.ಬಾಬುರಾವ್, ಕೃಷ್ಣ ಮಾಚರ್ಲಾ, ವೆಂಕಟೇಶ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News