×
Ad

ರಾಯಚೂರು | ಹಿಂದುಳಿದ ವರ್ಗಗಳ ಗಣತಿಯಲ್ಲಿ ಹಡಪದ ಹೆಸರು ಬರೆಸಲು ಮನವಿ

Update: 2025-09-16 19:00 IST

ರಾಯಚೂರು: ಹಿಂದುಳಿದ ವರ್ಗಗಳ ಗಣತಿಯಲ್ಲಿ ಹಡಪದ ಸಮಾಜದವರ ಹೆಸರು ಸ್ಪಷ್ಟವಾಗಿ ದಾಖಲಾಗುವಂತೆ ಕಾಲಂ 8ರಲ್ಲಿ ಹಿಂದು ಧರ್ಮ ಮತ್ತು ಕಾಲಂ 9ರಲ್ಲಿ ಎ-0445 – ಹಡಪದ ಎಂದು ಬರೆಸುವಂತೆ ಮನವಿ ಮಾಡಲಾಗಿದೆ ಎಂದು ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ ಗದ್ದೆಪ್ಪ ಜಕ್ಕೇರಮಡು ಹೇಳಿದರು.

ಸೆ.9ರಂದು ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಶ್ರೀ ಹಡಪದ ಅಪ್ಪಣ್ಣ ದೇವರ ಮಹಾ ಸಂಸ್ಥಾನ ಮಠದಲ್ಲಿ, ಶ್ರೀ ಅನ್ನಧಾನಿ ಭಾರತಿ ಅಪ್ಪಣ್ಣ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟದ ಅಧ್ಯಕ್ಷರು ಸೇರಿಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆ.

“ಧರ್ಮ ಕಾಲಂನಲ್ಲಿ ಹಿಂದೂ ಹಾಗೂ ಜಾತಿ ಕಾಲಂನಲ್ಲಿ ಹಡಪದ ಎಂದು ಬರೆಯಬೇಕು” ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಯಚೂರು ತಾಲೂಕು ಅಧ್ಯಕ್ಷ ಕರಿಬಸವ ಗಟ್ಟಬಿಚ್ಚಾಲಿ, ಸಿರವಾರ ತಾಲೂಕು ಅಧ್ಯಕ್ಷ ಮಹಾದೇವ ಕವಿತಾಳ, ಬಸವರಾಜ ಹರವಿ, ಧನಂಜಯ, ಗುಂಡಪ್ಪ ಮುದುಗಲ್, ಅಮರೇಶ ಮಟ್ಟೂರು, ಅಯ್ಯಪ್ಪ ದೊಡಂಬಳಿ, ಬಸವರಾಜ ಹೀರಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News