ರಾಯಚೂರು | ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ : ಲಕ್ಷಾಂತರ ರೂ. ನಷ್ಟ
Update: 2025-10-07 16:52 IST
ರಾಯಚೂರು: ಲಿಂಗಸುಗೂರು ತಾಲ್ಲೂಕಿನ ಹಾಲಭಾವಿ ಗ್ರಾಮದ ಹನುಮವ್ವ ಬಸಪ್ಪ ನಾಯಕ ಅವರ ಮನೆಯೊಂದರಲ್ಲಿ ಸೋಮವಾರ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಮನೆಗೆ ಬೆಂಕಿ ತಗುಲಿ ದಿನಸಿ ಧಾನ್ಯ, ಬಟ್ಟೆ, 50 ಸಾವಿರ ರೂಪಾಯಿ ನಗದು, 20 ಗ್ರಾಂ ಬಂಗಾರ ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಪ್ರತಿ ನಿತ್ಯದಂತೆ ರಾತ್ರಿಯ ವೇಳೆಯಲ್ಲಿ ಮನೆಯ ಹೊರಗಡೆ ವೃದ್ದೆ ಹನುಮವ್ವ ಮಲಗಿದ್ದು ಅದೃಷ್ಟವಶಾತ್ ಎಚ್ಚರಗೊಂಡು ಚೀರಾಡತೊಡಗಿದ್ದು ,ಬೆಂಕಿ ಕಾಣಿಸಿಕೊಂಡ ತಕ್ಷಣ ಅಕ್ಕ ಪಕ್ಕದ ಮನೆಯವರ ಸಹಕಾರ ಹಾಗೂ ಅಗ್ನಿ ಶಾಮಕ ದಳದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದಾರೆ.
ಘಟನಾ ಸ್ಥಳಕ್ಕೆ ಸ್ಥಳೀಯ ಕಂದಾಯ ಹಾಗೂ ಗ್ರಾಮ ಪಂಚಾಯತ ಇಲಾಖೆ ಅಧಿಕಾರಿಗಳು ಭೇಟಿ ನೀಡದೆ ಬೇಜವಾಬ್ದಾರಿ ಮೆರೆದಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.