×
Ad

ರಾಯಚೂರು |15 ಪ್ರಮುಖ ಹಕ್ಕೊತ್ತಾಯ ಪರಿಹಾರಕ್ಕೆ ಆಗ್ರಹಿಸಿ ನ.26ರಂದು ಬೆಂಗಳೂರು ಚಲೋ : ಡಿ.ಹೆಚ್ ಪೂಜಾರ್

Update: 2025-11-22 20:33 IST

ಸಿಂಧನೂರು : ರಾಜ್ಯದ ಜನಸಾಮಾನ್ಯರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಮತ್ತು ಕಾಂಗ್ರೆಸ್ ಸರಕಾರ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಮಾತುಕೊಟ್ಟಿದ್ದ ಹದಿನೈದು ಪ್ರಮುಖ ಹಕ್ಕೊತ್ತಾಯಗಳ ಪರಿಹಾರಕ್ಕಾಗಿ ಆಗ್ರಹಿಸಿ ಹಾಗೂ ಕೇಂದ್ರ ಸರಕಾರದ ನೀತಿಗಳನ್ನು ವಿರೋಧಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯಿಂದ ನ.26 ರಂದು ಬೃಹತ್ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕೋರ್ ಕಮೀಟಿ ಸದಸ್ಯ ಡಿ.ಹೆಚ್.ಪೂಜಾರ್ ಹೇಳಿದರು.

ಶನಿವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಹೆಚ್.ಪೂಜಾರ್,  ರಾಜ್ಯ ಹಾಗೂ ಕೇಂದ್ರ ಸರಕಾರದ ನೀತಿಗಳನ್ನು ಧಿಕ್ಕರಿಸಿ ಸಂಯುಕ್ತ ಕಿಸಾನ್ ಮೋರ್ಚಾ ಜೆಸಿಟಿಯು ಹಾಗೂ ವಿವಿಧ ಸಂಘಟನೆಗಳ ಕರೆಯ ಮೇರೆಗೆ ಬೆಂಗಳೂರು ಚಲೋ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಕೇಂದ್ರ ಸರಕಾರ ರೈತರು, ಕಾರ್ಮಿಕರು ಹಾಗೂ ಇತರೆ ಜನವರ್ಗಗಳ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಖಾಸಗಿ ಕಂಪೆನಿಗಳ ಹಿತ ಕಾಯುವುದರಲ್ಲಿ ಮಗ್ನವಾಗಿದೆ. ಇದರಿಂದ ಜನರು ತೀವ್ರ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಬಿಜೆಪಿ ತಂದಿದ್ದ ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನ ವಿರೋಧಿ ನೀತಿಗಳನ್ನು ಬದಲಾಯಿಸುತ್ತೇವೆ. ಜನಹಿತ ರಕ್ಷಿಸುತ್ತೇವೆ. ಕಾಂಗ್ರೆಸ್ ಸರಕಾರ ಈಗ ಏನು ಮಾಡುತ್ತಿದೆ? ಬರೀ ಆಶ್ವಾಸನೆ ನೀಡುತ್ತಾ ಕಾಲ ಕಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಹಕ್ಕು ಕಾಯ್ದೆ 2006ರ ಪ್ರಕಾರ ಆದಿವಾಸಿಗಳಿಗೆ ಮಾತ್ರವಲ್ಲದೆ, ಎಲ್ಲಾ ಆರಣ್ಯವಾಸಿಗಳಿಗೂ ಭೂಮಿ ಹಕ್ಕು ನೀಡಬೇಕು. ಭೂಮಿಗಳ ಖಾತೆಗಳನ್ನು ಯಾವುದೇ ಕಾರಣಕ್ಕೂ ರದ್ದುಪಡಿಸಬಾರದು. ವಸತಿ ನಿವೇಶನಗಳ ಹಂಚಿಕೆಗೆ ಸರಕಾರ ಮೆಗಾ ಯೋಜನೆ ರೂಪಿಸಬೇಕು. ‘ಪ್ರತಿಯೊಬ್ಬರಿಗೂ ಸೂರು’ ಸರ್ಕಾರದ ಕಾರ್ಯನೀತಿಯಾಗಬೇಕು ಎಂದು ಹೇಳಿದರು.  

ಈ ಸಂದರ್ಭದಲ್ಲಿ ಮುಖಂಡರಾದ ಬಸಲಿಂಗಪ್ಪ, ಬಿ.ಎನ್.ಯರದಿಹಾಳ, ಚಿಟ್ಟಿಬಾಬು ಬೂದಿವಾಳ ಕ್ಯಾಂಪ್, ರಮೇಶ್‌ ಪಾಟೀಲ್ ಬೇರಗಿ, ಬಸನಗೌಡ ಮುಳ್ಳೂರು, ಹೆಚ್.ವಿರೂಪಾಕ್ಷಗೌಡ ಕಲ್ಲೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News