Raichuru | ಬರ ಪೀಡಿತ ಪ್ರದೇಶಗಳಿಗೆ ಸಚಿವ ಡಾ.ಅಜಯ್ ಧರ್ಮಸಿಂಗ್ ಭೇಟಿ, ಪರಿಶೀಲನೆ
ರಾಯಚೂರು: ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆಯ ಪರಿಶೀಲನೆಗಾಗಿ ಸಚಿವ ಡಾ. ಅಜಯ್ ಧರ್ಮಸಿಂಗ್ ಇಂದಿನಿಂದ ಎರಡು ದಿನಗಳ ರಾಯಚೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಇಂದು ಬೆಳಗ್ಗೆ ನಗರದ ಯಕ್ಲಾಸಪೂರು ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ಹತ್ತಿ ಬೆಳೆ ವೀಕ್ಷಣೆ ಮಾಡಿ ರೈತರಿಂದ ಮಾಹಿತಿ ಪಡೆದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ದೇಶನದಂತೆ ಸಚಿವರು ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಪರಿಶೀಲಿಸುತ್ತಿದ್ದಾರೆ. ರಾಯಚೂರು ಗ್ರಾಮಾಂತರ ಪ್ರದೇಶದ ಯಕ್ಲಾಸಪೂರು, ಗೋನಾಳ ಸುತ್ತಮುತ್ತಲು ವೀಕ್ಷಣೆ ಮಾಡಿದ್ದು, ದೇವದುರ್ಗ, ಲಿಂಗಸುಗೂರು ಮಸ್ಕಿ ಕಡೆ ತೆರಳಿದ್ದಾರೆ.
ಶನಿವಾರ ಲಿಂಗಸುಗೂರು, ಮಾನ್ವಿ, ಸಿಂಧನೂರು ತಾಕೂಕಿಗೆ ಭೇಟಿ ನೀಡುವರು.
ಯಕ್ಲಾಸಪೂರು ಗ್ರಾಮದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಈ ವರ್ಷ ಭೀಕರ ಬರಗಾಲ ಇದೆ. ಕೂಡಲೇ ಸರ್ಕಾರ ಎಕರೆಗೆ 50 ಸಾವಿರ ಪರಿಹಾರ ನೀಡಬೇಕು, ಸಚಿವ ಸಂಪುಟದ ಮೊದಲನೇ ಸಭೆ ಆದಿವೇಶನದಲ್ಲಿ ಕೂಡಲೇ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.