ರಾಯಚೂರು | ಮೋಟಾರು ಪಂಪ್‍ಸೆಟ್‍ಗಳ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಬಂಧನ
Update: 2025-11-20 18:37 IST
ರಾಯಚೂರು : ವಿವಿಧೆಡೆ ಮೋಟರ್ ಪಂಪ್ ಸೆಟ್‍ಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಆರೋಪಿಗಳಿಂದ 4.31 ಲಕ್ಷ ರೂ.ಮೌಲ್ಯದ 18 ಮೋಟರ್ ಪಂಪ್‍ಸೆಟ್‍ಗಳು ಹಾಗೂ ಕೃತ್ಯಕ್ಕೆ ಬಳಿಸಿದ ಮಾರುತಿ ಶಿಫ್ಟ್ ಕಾರನ್ನು ವಶಕ್ಕೆ ಪಡೆದಿದ್ದಾರೆ.
ರಾಯಚೂರು ತಾಲೂಕಿನ ಕೊರ್ವಿಹಾಳ ಗ್ರಾಮದ ನರಸಿಂಗ ಎಂಬುವವರ ಮನೆ ಮುಂದೆ 1.10 ಲಕ್ಷ ರೂ. ಮೌಲ್ಯದ ರಿಪೇರಿಗಾಗಿ ಇಟ್ಟಿದ್ದ 5 ಎಚ್‍ಪಿ ಎರಡು ಮೋಟರ್ ಪಂಪ್‍ಸೆಟ್, 7.5 ಎಚ್.ಪಿ ಒಂದು ಮೋಟ್ ಪಂಪ್‍ಸೆಟ್ ನವೆಂಬರ್ 13ರಂದು ಕಳ್ಳತನವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಈ ಕುರಿತು ತನಿಖೆ ನಡೆಸಿದ ಪೊಲೀಸರು ತೆಲಂಗಾಣದ ನಿವಾಸಿಯಾಗಿರುವ ಪಂಪ್‍ಸೆಟ್ ಮೆಕಾನಿಕ್ ವಿಜಯಕುಮಾರ್ ಮತ್ತು ಜಿ.ಆದಿಗೌಡ ಎಂಬಾತನನ್ನು ಬಂಧಿಸಿದ್ದಾರೆ.