ರಾಯಚೂರು| ಮಿಲ್ಟನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ
ಮಾನ್ವಿ :ವಿಜ್ಞಾನ ವಸ್ತು ಪ್ರದರ್ಶನ ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪೂರಕವಾಗುತ್ತದೆ ಎಂದು ಸಿ ಪಿ ಐ ಸೋಮಶೇಖರ್ ಕೆಂಚರೆಡ್ಡಿ ಹೇಳಿದರು.
ಪಟ್ಟಣದ ಮಿಲ್ಟನ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಹಮ್ಮಿಕೊಂಡ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿ ಪಿ ಐ ಸೋಮಶೇಖರ್ ಕೆಂಚರೆಡ್ಡಿ, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸಿ ಹೊಸದೊಂದು ಪ್ರದರ್ಶನ ಮಾಡುತ್ತಾರೆ. ಅದು ಅವರಲ್ಲಿನ ಸೃಜನಶೀಲತೆಗೆ ಉತ್ತೇಜನ ನೀಡುತ್ತದೆ. ಹೊಸ ತಂತ್ರಜ್ಞಾನದ ಅರಿವು, ಹೊಸದೊಂದು ಪರಿಕಲ್ಪನೆ ಮೂಡುತ್ತದೆ. ಅದು ಅವರ ಮುಂದಿನ ಶಿಕ್ಷಣಕ್ಕೂ ಸ್ಪೂರ್ತಿಯಾಗುತ್ತದೆ. ವಸ್ತು ಪ್ರದರ್ಶನ ಪ್ರತಿಯೊಂದು ಶಾಲೆಯಲ್ಲೂ ಆಯೋಜಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಅದರಲ್ಲಿ ಪಾಲ್ಗೊಳ್ಳುವಂತೆ ಮಾಡಿದರೆ ವಿಜ್ಞಾನ, ತಂತ್ರಜ್ಞಾನ ಅರಿವು ಸಿಗುತ್ತದೆ. ಅಂತಹ ಚಿಂತನೆ ಪ್ರತಿಯೊಂದು ಶಾಲೆಯಲ್ಲೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವಿಜ್ಞಾನ ವಸ್ತು ಪ್ರದರ್ಶನ ಎಂದರೆ ವಿದ್ಯಾರ್ಥಿಗಳು ವೈಜ್ಞಾನಿಕ ತತ್ವಗಳು, ಪ್ರಯೋಗಗಳು ಮತ್ತು ಮಾದರಿಗಳನ್ನು ಪ್ರದರ್ಶಿಸುವ ಒಂದು ಕಾರ್ಯಕ್ರಮವಾಗಿದ್ದು, ಇದರ ಮುಖ್ಯ ಉದ್ದೇಶ ವೈಜ್ಞಾನಿಕ ಅನ್ವೇಷಣೆಯನ್ನು ಉತ್ತೇಜಿಸುವುದು, ಕೌಶಲ್ಯಗಳನ್ನು ಬೆಳೆಸುವುದು, ಸೃಜನಾತ್ಮಕತೆಯನ್ನು ಹೆಚ್ಚಿಸುವುದು ಮತ್ತು ವಿಜ್ಞಾನದ ಬಗ್ಗೆ ಸಾಮಾನ್ಯ ಆಸಕ್ತಿಯನ್ನು ಮೂಡಿಸುವುದು. ಇದರಲ್ಲಿ ವಿದ್ಯಾರ್ಥಿಗಳು ಪರಿಸರ, ಭೌತಶಾಸ್ತ್ರ, ರಸಾಯನಶಾಸ್ತ್ರದಂತಹ ವಿಷಯಗಳ ಕುರಿತು ವಿವಿಧ ಮಾದರಿಗಳು ಮತ್ತು ಕಾರ್ಯರೂಪದ ಯೋಜನೆಗಳನ್ನು ಪ್ರದರ್ಶಿಸುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೊಯೋಲಾ ಫಾದರ್ ಪ್ರವೀಣ್, ಕಾಂಗ್ರೆಸ್ ಮುಖಂಡ ಕೃಪಾ ಸಾಗರ ಪಾಟೀಲ್, ಕೆ ಬಸವಂತಪ್ಪ, ಪುರಸಭೆ ಸದಸ್ಯ ಅಜ್ಮದ್ ಖಾನ್, ಶಾಲೆಯ ಅಧ್ಯಕ್ಷರಾದ ಸೂರ್ಯ ಪ್ರಭಾ ದುವ್ವಾಡ, ಉಪಾಧ್ಯಕ್ಷ ಜಯಂತ್ ದುಬ್ವಾಡ, ಕಾರ್ಯದರ್ಶಿ ದುವ್ವಾಡ ವರ ಪ್ರಕಾಶ, ಖಜಾಂಚಿ ಸೌಮ್ಯ ದುವ್ವಾಡ, ಮುಖ್ಯ ಶಿಕ್ಷಕ ನಿಶಾಂತ್ ದೊಡ್ಡಿ, ಶಿಕ್ಷಕಿ ರಾಖಿ ಸೇರಿದಂತೆ ಶಿಕ್ಷಕರು, ಪಾಲಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.