ರಾಯಚೂರು| ಟ್ರ್ಯಾಕ್ಟರ್‌ಗೆ ಟಿಪ್ಪರ್ ಢಿಕ್ಕಿ: ವ್ಯಕ್ತಿ ಸ್ಥಳದಲ್ಲೇ ಮೃತ್ಯು
Update: 2026-01-11 18:22 IST
ರಾಯಚೂರು: ಹತ್ತಿ ತುಂಬಿದ್ದ ಟ್ರ್ಯಾಕ್ಟರ್‌ಗೆ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್‌ನಲ್ಲಿದ್ದ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಹೊರವಲಯದ ಲಿಂಗಸುಗೂರು ರಸ್ತೆಯ ಬೈಪಾಸ್ ಬಳಿ ನಡೆದಿದೆ.
ಮೃತನನ್ನು ಗೋರ್ಕಲ್ ಗ್ರಾಮದ ನಿವಾಸಿ ನಾಗರಾಜ(55) ಎಂದು ಗುರುತಿಸಲಾಗಿದೆ.
ಗೋರ್ಕಲ್ ಗ್ರಾಮದಿಂದ ಹತ್ತಿ ಮಾರಾಟ ಮಾಡಲು ರಾಯಚೂರು ನಗರಕ್ಕೆ ಬರುತ್ತಿದ್ದ ವೇಳೆ ಟ್ರ್ಯಾಕ್ಟರ್ ಹಿಂಬದಿಯ ಟ್ರ್ಯಾಲಿಗೆ ಟಿಪ್ಪರ್ ಢಿಕ್ಕಿ ಹೊಡೆದಿದೆ. ಈ ವೇಳೆ ಟ್ರ್ಯಾಕ್ಟರ್ ಮೇಲೆ ಕೂತಿದ್ದ ನಾಗರಾಜ ಅವರು ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.