ರಾಯಚೂರು | ವುಮೆನ್ ಮೂಮೆಂಟ್ ವತಿಯಿಂದ ‘ಮಹಿಳಾ ಭದ್ರತೆಯೇ ಸ್ವಾತಂತ್ರ್ಯದ ಅಳತೆಗೋಲು’ ಕಾರ್ಯಕ್ರಮ
ರಾಯಚೂರು: ಸ್ವಾತಂತ್ರ್ಯೊತ್ಸವದ ಅಂಗವಾಗಿ ವುಮೆನ್ ಇಂಡಿಯಾ ಮೂಮೆಂಟ್ ವತಿಯಿಂದ ನಗರದ ಶಮೀಮ್ ಫಂಕ್ಷನ್ ಹಾಲ್‌ನಲ್ಲಿ ‘ಮಹಿಳಾ ಭದ್ರತೆಯೇ ಸ್ವಾತಂತ್ರ್ಯದ ಅಳತೆಗೋಲು’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ ಪ್ರದರ್ಶನ ಹಾಗೂ ಮಹಿಳೆಯರಿಗಾಗಿ ಪ್ರಶ್ನೋತ್ತರ, ಪ್ರಬಂಧ ಬರವಣಿಗೆ, ಮೆಹೆಂದಿ ಸ್ಪರ್ಧೆ ಆಯೋಜಿಸಲಾಯಿತು.
ವುಮೆನ್ ಇಂಡಿಯಾ ಮೂಮೆಂಟ್ ಜಿಲ್ಲಾ ಅಧ್ಯಕ್ಷೆ ತಬಸ್ಸುಂ ಸಾಹಿಬಾ ಹಾಗೂ ಜಿಲ್ಲಾ ಕಾರ್ಯದರ್ಶಿ ಸಾದಿಯಾ ಸಾಹಿಬಾ ಅಧ್ಯಕ್ಷತೆ ವಹಿಸಿ ಮಹಿಳೆಯರ ಸ್ವಾತಂತ್ರ್ಯ, ಕಾನೂನುಗಳ ಬಗ್ಗೆ ತಿಳಿಸಿದರು.
ಸಮ್ರೀನ್ ಸಾಹಿಬಾ, ಬಶೀರುನ್ನಿಸ್ಸಾ ಸಾಹಿಬಾ, ನಯ್ಯಾರ್ ತಯ್ಯಬ್ಬಾ ಸಾಹಿಬಾ, ಸೈರಾ ಸಾಹಿಬಾ, ಶಹ್ನಾಜ್ ಸಾಹಿಬಾ, ಡಾ. ಇಶ್ರತ್ ಸಾಹಿಬಾ, ಡಾ.ಅಹ್ಮದಿ ಸಾಹಿಬಾ, ಡಾ. ಶಾಜಿಯಾ ಸಾಹಿಬಾ, ಸಲ್ಮಾ ಖಾನುಂ, ಆಲಿಮಾ ಅಸ್ಮಾ ಸಾಹಿಬಾ ಹಾಗೂ ಸಜೀದಾ ಫಾತಿಮಾ ಸಾಹಿಬಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅನೇಕ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಭಾಗವಹಿಸಿದ್ದರು.