×
Ad

ಅ.2 ರಿಂದ ಸುಭೋದ್ ಯಾದವ್ ರಾಯಚೂರು ಜಿಲ್ಲಾ ಪ್ರವಾಸ

Update: 2025-09-30 18:42 IST

ರಾಯಚೂರು : ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯ, ಜಲಸಂಪನ್ಮೂಲ ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜಿವನ ಇಲಾಖೆಯ ಅಪರ ಕಾರ್ಯದರ್ಶಿಗಳಾದ ಸುಭೋದ್ ಯಾದವ್ ಅವರು ಅ.2 ಹಾಗೂ 3ರಂದು ರಾಯಚೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಅ.2ರ ಬೆಳಿಗ್ಗೆ 9.30 ಗಂಟೆಗೆ ಹೈದರಾಬಾದ್‌ನಿಂದ ನಿರ್ಗಮಿಸಿ ರಸ್ತೆ ಮಾರ್ಗವಾಗಿ ಮಧ್ಯಾಹ್ನ 1 ಗಂಟೆಗೆ ರಾಯಚೂರು ನಗರಕ್ಕೆ ಆಗಮಿಸುವರು. ಮಧ್ಯಾಹ್ನ 2 ಗಂಟೆಗೆ ಸಿರವಾರ ಮತ್ತು ಮಸ್ಕಿಗೆ ತೆರಳಿ ಸಿರವಾರ ಮತ್ತು ಮಸ್ಕಿ ಬ್ಲಾಕ್‌ಗಳಲ್ಲಿ ಎಡಿಪಿ ಹಾಗೂ ಎಬಿಪಿಯ ಭೌತಿಕ ಪ್ರಗತಿಯ ವಿಮರ್ಶೆ ಮಾಡಲಿದ್ದಾರೆ.

ಅ.3ರ ಬೆಳಿಗ್ಗೆ 9ಕ್ಕೆ ಮಹತ್ವಕಾಂಕ್ಷೆಯ ಜಿಲ್ಲೆಯ ಬ್ಲಾಕ್ ಕಾರ್ಯಕ್ರಮದ ಅಡಿಯಲ್ಲಿ ಚಟುವಟಿಕೆಗಳಿಗೆ ಕ್ಷೇತ್ರಗಳಿಗೆ ಭೇಟಿ ನೀಡುವರು. ಮಧ್ಯಾಹ್ನ 1 ಗಂಟೆಗೆ ರಾಯಚೂರಿನಿಂದ ರಸ್ತೆ ಮೂಲಕ ಹೈದರಾಬಾದ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News