ಬಿಎಸ್‌ಪಿಯಿಂದ ಒಂದು ಓಟು ಕೊಡಿ, ಒಂದು ನೋಟು ಕೊಡಿ ಅಭಿಯಾನ
ದೇವದುರ್ಗ: ಮಾಯಾವತಿ ಅವರ 70ನೇ ಜನ್ಮದಿನದ ಅಂಗವಾಗಿ ಬಹುಜನ ಸಮಾಜ ಪಕ್ಷದ ವತಿಯಿಂದ ವಾರದ ಶನಿವಾರ ಸಂತೆಯಲ್ಲಿ ಪಕ್ಷದ ಮುಖಂಡರು ಒಂದು ಓಟು ಕೊಡಿ, ಒಂದು ನೋಟು ಕೊಡಿ ಅಭಿಯಾನ ನಡೆಸಿದರು.
ಈ ವೇಳೆ ಬಿಎಸ್‌ಪಿ ಜಿಲ್ಲಾಧ್ಯಕ್ಷ ವೆಂಕನಗೌಡ ನಾಯಕ ಮಾತನಾಡಿ, ಪಕ್ಷ ಸಂಘಟನೆಗಾಗಿ ಇಂತಹ ಅಭಿಯಾನ ಕಾರ್ಯಕ್ರಮ ಮೂಲಕ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ನಮ್ಮನಾಳುವ ಸರಕಾರಗಳು ಅಧಿಕಾರಕ್ಕೆ ಬರುವ ಮುನ್ನ ಎಲ್ಲಾ ಸೌಲಭ್ಯಗಳು ನೀಡುವ ಭರವಸೆ ನೀಡುತ್ತವೆ. ಆದರೆ ಗೆದ್ದ ಮೇಲೆ ಹಾಡುವ ರಾಗಗಳೇ ಬದಲಾಗಿವೆ. ಇಂತಹ ವ್ಯವಸ್ಥೆ ಜಾರಿಯಾದ್ದರಿಂದ ಜನರು ಬದಕು ಕಟ್ಟಿಕೊಳ್ಳಲು ಮಹಾನಗರದತ್ತ ಗೊಳೆ ಹೊರಟಿದ್ದಾರೆ. ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಕೆಲಸ ನೀಡುತ್ತಿಲ್ಲ. ಕಳೆದ ಆರೇಳು ತಿಂಗಳಿಂದ ಉದ್ಯೋಗ ಖಾತ್ರಿ ಯೋಜನೆಗಳ ಕೆಲಸ ಸ್ಥಬ್ತವಾಗಿದೆ ಎಂದು ದೂರಿದರು.
ಈ ವೇಳೆ ಎಂಆರ್ ಭೇರಿ, ಬಿಎಸ್‌ಪಿ ಪಕ್ಷದ ತಾಲೂಕಾಧ್ಯಕ್ಷ ಏಸು ಕಮಲ್ಮದಿನಿ, ಶಿವಪ್ಪ ಬಲ್ಲಿದವ್, ಯಲ್ಲಪ್ಪ ಕಾಕರಗಲ್, ರತ್ನಕರ್ ಶಾವಂತಗೇರಾ, ಹನುಮಂತ ಗಾಣಾಧಳ, ದುರಗಪ್ಪ ಬುಂಕಲದೊಡ್ಡಿ, ಹನುಮಂತ ದೊಂಡಬಂಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.