×
Ad

ಸಾಗರ: ಮಹಿಳೆಗೆ ಹಲ್ಲೆ ನಡೆಸಿ ಸರ ಅಪಹರಣ

Update: 2023-09-15 15:29 IST

ಸಾಗರ: ವಿಳಾಸ ಕೇಳುವ ನೆಪದಲ್ಲಿ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಮಹಿಳೆ ಮೇಲೆ ಹಲ್ಲೆ ಮಾಡಿ ಮಾಂಗಲ್ಯ ಸರ ಅಪಹರಿಸಿಕೊಂಡು ಪರಾರಿಯಾಗಿರುವ ಘಟನೆ ವಿನೋಬ ನಗರದಲ್ಲಿ ಶುಕ್ರವಾರ ನಡೆದಿದೆ.

ಸಂತ್ರಸ್ತ ಮಹಿಳೆಯನ್ನು ವಿಜಯಮ್ಮ (65) ಎಂದು ಗುರುತಿಸಲಾಗಿದೆ. ಅಂಗಡಿಗೆ ಹೋಗಿ ಹಿಂದುರುಗುತ್ತಿದ್ದಾಗ ನಂಬರ್ ಪ್ಲೇಟ್ ಇಲ್ಲದ ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

ಬೈಕಿನಿಂದ ಇಳಿದು ಬಂದ ಒಬ್ಬಾತ ನನ್ನ ಮುಖಕ್ಕೆ ಹೊಡೆದು ಮಾಂಗಲ್ಯ ಸರ ಎಳೆದಿದ್ದಾನೆ. ಆದರೆ ನಾನು ಮಾಂಗಲ್ಯ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡ ಕಾರಣ 40 ಗ್ರಾಂ ಇದ್ದ ಸರದಲ್ಲಿ ಅಂದಾಜು 8 ಗ್ರಾಮ ನಷ್ಟು ತುಂಡಾಗಿ ಹೊಗಿದೆ ಎಂದು ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News