ಉಳ್ಳಾಲ: ಅ.26 ರಂದು ಮಾರ್ಗ ತಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ
Update: 2025-10-23 14:46 IST
ಉಳ್ಳಾಲ: ಅಲ್ ಮಸ್ಜಿದುಲ್ ಮಿಹ್ರಾಜ್, ಅಲ್ ಅಮೀನ್ ಸ್ವಲಾತ್ ಕಮಿಟಿ, ಕರ್ನಾಟಕ ಮುಸ್ಲಿಂ ಜಮಾಅತ್ , ಸುನ್ನೀ ಯುವಜನ ಸಂಘ ಮಾರ್ಗತಲೆ ಉಳ್ಳಾಲ ಇವುಗಳ ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ ಅ.26 ಭಾನುವಾರ ನಡೆಯಲಿದೆ.
ಯೆನೆಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಇದರ ಸಹಯೋಗದೊಂದಿಗೆ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾರ್ಗತಲೆ ಮದರಸ ಹಾಲ್ ನಲ್ಲಿ ನಡೆಯುವ ಈ ಉಚಿತ ವೈದ್ಯಕೀಯ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕಾಗಿ ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.