×
Ad

ಟೀಂ ಇಂಡಿಯಾದ ಡ್ರೆಸಿಂಗ್‌ ರೂಂ ಪ್ರವೇಶಿಸಿದ ಪ್ರಧಾನಿ ಮೋದಿ ಅವರನ್ನು ಟೀಕಿಸಿದ 1983 ರ ವಿಶ್ವಕಪ್‌ ವಿಜೇತ ತಂಡದ ಸದಸ್ಯ

Update: 2023-11-21 16:37 IST

Photo: X/@DDNewslive

ಹೊಸದಿಲ್ಲಿ: ವಿಶ್ವಕಪ್‌ ಫೈನಲ್‌ ಪಂದ್ಯಾಟದಲ್ಲಿ ಆಸ್ಟ್ರೇಲಿಯ ಎದುರು ಭಾರತದ ಕ್ರಿಕೆಟ್‌ ತಂಡ ಸೋತ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಡ್ರೆಸ್ಸಿಂಗ್‌ ರೂಮ್‌ಗೆ ಭೇಟಿ ನೀಡಿ ಆಟಗಾರರನ್ನು ಸಂತೈಸಿರುವುದಕ್ಕೆ ಹಿರಿಯ ಕ್ರಿಕೆಟಿಗನಿಂದ ಅಪಸ್ವರ ಕೇಳಿ ಬಂದಿದೆ.

1983 ರ ಕ್ರಿಕೆಟ್ ವಿಶ್ವಕಪ್‌ ವಿಜೇತ ತಂಡದದಲ್ಲಿದ್ದ ಕೀರ್ತಿ ಆಝಾದ್‌ ಅವರು ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಡ್ರೆಸ್ಸಿಂಗ್ ರೂಮ್‌ನಲ್ಲಿ ಆಟಗಾರರನ್ನು ಭೇಟಿ ಮಾಡಿದ್ದಕ್ಕಾಗಿ ಪ್ರಧಾನಿ ಮೋದಿಯನ್ನು ದೂಷಿಸಿದರು.

"ಡ್ರೆಸ್ಸಿಂಗ್ ರೂಮ್ ಯಾವುದೇ ತಂಡದ ಪವಿತ್ರ ಸ್ಥಳವಾಗಿದೆ. ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಹೊರತುಪಡಿಸಿ ಯಾರನ್ನೂ ಈ ಕೊಠಡಿಗಳಿಗೆ ಪ್ರವೇಶಿಸಲು ICC ಅನುಮತಿಸುವುದಿಲ್ಲ. ಭಾರತದ ಪ್ರಧಾನ ಮಂತ್ರಿ ಡ್ರೆಸ್ಸಿಂಗ್ ರೂಮ್‌ನ ಹೊರಗೆ ಖಾಸಗಿ ಸಂದರ್ಶಕರ ಪ್ರದೇಶದಲ್ಲಿ ತಂಡವನ್ನು ಭೇಟಿಯಾಗಬೇಕಿತ್ತು” ಎಂದು ಅವರು ಹೇಳಿದ್ದಾರೆ.

ತಮ್ಮ ಬೆಡ್ ರೂಮಿಗೆ ಬಂದು ಸಾಂತ್ವನ ಹೇಳಲು ಅಥವಾ ಅಭಿನಂದಿಸಲು ಅವರ ಬೆಂಬಲಿಗರಿಗೆ ಅವಕಾಶ ನೀಡುತ್ತೀರಾ ಎಂದು ಅವರು ಪ್ರಧಾನಿ ಮೋದಿಯನ್ನು ಪ್ರಶ್ನಿಸಿದರು.

“ನರೇಂದ್ರ ಮೋದಿ ಅವರು ತಮ್ಮ ಬೆಡ್‌ರೂಮ್, ಡ್ರೆಸ್ಸಿಂಗ್ ರೂಮ್ ಅಥವಾ ಟಾಯ್ಲೆಟ್‌ಗೆ ಬಂದು ಸಾಂತ್ವನ ಹೇಳಲು ಅಥವಾ ಅಭಿನಂದಿಸಲು ತಮ್ಮ ಬೆಂಬಲಿಗರನ್ನು ಅನುಮತಿಸುತ್ತಾರೆಯೇ? ಕ್ರೀಡಾಪಟುಗಳು ರಾಜಕಾರಣಿಗಳಿಗಿಂತ ಹೆಚ್ಚು ಶಿಸ್ತು ಹೊಂದಿರುತ್ತಾರೆ” ಎಂದು ಅವರು ಕಿಡಿ ಕಾರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News