2026ರ ಮಹಿಳೆಯರ ಹಾಕಿ ವಿಶ್ವಕಪ್ : 20 ಸದಸ್ಯರ ತಂಡ ಪ್ರಕಟಿಸಿದ ಹಾಕಿ ಇಂಡಿಯಾ

Update: 2026-07-17 22:20 IST

Photo Credit : thehindu.com

ಚೆನ್ನೈ, ಜು.17: ಮುಂಬರುವ ಎಫ್‌ಐಎಚ್ ಮಹಿಳೆಯರ ಹಾಕಿ ವಿಶ್ವಕಪ್‌ಗೆ ಹಾಕಿ ಇಂಡಿಯಾವು ಶುಕ್ರವಾರ 20 ಸದಸ್ಯರ ತಂಡವನ್ನು ಪ್ರಕಟಿಸಿದೆ. ಮಿಡ್ ಫೀಲ್ಡರ್ ಸಲಿಮಾ ಟೇಟೆ ತಂಡವನ್ನು ನಾಯಕಿಯಾಗಿ ಮುನ್ನಡೆಸಲಿದ್ದಾರೆ.

ವಿಶ್ವಕಪ್ ಟೂರ್ನಿಯನ್ನು ನೆದರ್‌ಲ್ಯಾಂಡ್ಸ್ ಹಾಗೂ ಬೆಲ್ಜಿಯಮ್ ಆಗಸ್ಟ್ 15ರಿಂದ 30ರ ತನಕ ಜಂಟಿಯಾಗಿ ಆಯೋಜಿಸಲಿವೆ.

ಭಾರತ ಮಹಿಳಾ ತಂಡವು ಸದ್ಯ ಬೆಂಗಳೂರಿನಲ್ಲಿ ರಾಷ್ಟ್ರೀಯ ಶಿಬಿರದಲ್ಲಿ ತರಬೇತಿ ನಿರತವಾಗಿದೆ. ಕಳೆದ ತಿಂಗಳು ನ್ಯೂಝಿಲ್ಯಾಂಡ್‌ನಲ್ಲಿ ನಡೆದಿದ್ದ ಎಫ್‌ಐಏಚ್ ನೇಶನ್ಸ್ ಕಪ್ ಅನ್ನು ಜಯಿಸಿದ ಭಾರತ ಅಜೇಯವಾಗುಳಿದಿತ್ತು.

ವಿಶ್ವಕಪ್‌ನಲ್ಲಿ ಭಾರತ ತಂಡವು ಚೀನಾ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡದೊಂದಿಗೆ ಡಿ ಗುಂಪಿನಲ್ಲಿ ಸ್ಥಾನಪಡೆದಿದೆ. ಆ.16ರಂದು ಚೀನಾದ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ. ಆ ನಂತರ ಆ.18ರಂದು ದ.ಆಫ್ರಿಕಾ ಹಾಗೂ ಆ.20ರಂದು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

2026ರ ಮಹಿಳೆಯರ ಹಾಕಿ ವಿಶ್ವಕಪ್‌ಗೆ ಭಾರತ ತಂಡ:

ಗೋಲ್‌ಕೀಪರ್‌ಗಳು: ಸವಿತಾ, ಬಿಚು ದೇವಿ

ಡಿಫೆಂಡರ್‌ಗಳು: ಇಶಿಕಾ ಚೌಧರಿ, ಸುಶೀಲಾ ಚಾನು, ಎಲ್. ಜ್ಯೋತಿ, ಶಿಲ್ಪಿ ದಾಬಸ್

ಮಿಡ್ ಫೀಲ್ಡರ್‌ಗಳು: ನಿಕ್ಕಿ ಪ್ರಧಾನ್, ಸಾಕ್ಷಿ ರಾಣಾ, ಸುನೆಲಿತಾ ಟೊಪ್ಪೊ, ಸಲಿಮಾ ಟೇಟೆ(ನಾಯಕಿ), ನೇಹಾ, ದೀಪಿಕಾ ಸೊರೆಂಗ್

ಫಾರ್ವರ್ಡ್‌ಗಳು: ಲಾಲ್‌ರೆಂಸಿಯಾಮಿ, ಋತುಜಾ, ನವನೀತ್ ಕೌರ್, ದೀಪಿಕಾ, ಇಶಿಕಾ, ಬಲ್ಜೀತ್ ಕೌರ್, ಬ್ಯೂಟಿ ಡಂಗ್‌ಡಂಗ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News