×
Ad

ಅಡಿಲೇಡ್ ಇಂಟರ್ನ್ಯಾಶನಲ್ ಟೆನಿಸ್ ಟೂರ್ನಿ ; ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ ಫೈನಲ್ ಗೆ

Update: 2024-01-13 22:04 IST

ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ | Photo: X \@the_bridge_in

ಹೊಸದಿಲ್ಲಿ : ಅಡಿಲೇಡ್ನಲ್ಲಿ ತಮ್ಮ ಗಮನಾರ್ಹ ಪ್ರದರ್ಶನ ಮುಂದುವರಿಸಿದ ರೋಹನ್ ಬೋಪಣ್ಣ ಹಾಗೂ ಮ್ಯಾಥ್ಯೂ ಎಬ್ಡೆನ್ ಅಡಿಲೇಡ್ ಇಂಟರ್ನ್ಯಾಶನಲ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಗೆ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಪುರುಷರ ಡಬಲ್ಸ್ ಸೆಮಿ ಫೈನಲ್ ನಲ್ಲಿ ಬೋಪಣ್ಣ-ಎಬ್ಡೆನ್ ಜೋಡಿಯು ಗೊಂಝಾಲೊ ಎಸ್ಕೊಬರ್ ಹಾಗೂ ಅಲೆಕ್ಸಾಂಡರ್ ನೆಡೊವ್ಸೆವ್ರನ್ನು 6-4, 6-4 ನೇರ ಸೆಟ್ ಗಳಿಂದ ಮಣಿಸಿದೆ.

ಬೋಪಣ್ಣ-ಎಬ್ಡೆನ್ ಫೈನಲ್ ಪಂದ್ಯದಲ್ಲಿ ಮೂರು ಬಾರಿಯ ಯುಎಸ್ ಓಪನ್ ಚಾಂಪಿಯನ್ ಗಳಾದ ರಾಜೀವ್ ರಾಮ್ ಹಾಗೂ ಜೋ ಸಾಲಿಸ್ಬರಿ ಅವರನ್ನು ಎದುರಿಸಲಿದ್ದಾರೆ. ರಾಮ್ ಹಾಗೂ ಸಾಲಿಸ್ಬರಿ ಮತ್ತೊಂದು ಪುರುಷರ ಡಬಲ್ಸ್ ಸೆಮಿ ಫೈನಲ್ ನಲ್ಲಿ ಹ್ಯೂಗೊ ನೀಸ್ ಹಾಗೂ ಜಾನ್ ಝಿಲಿನ್ಸ್ಕಿ ಅವರನ್ನು 7-6(4), 5-5, 10-6 ಅಂತರದಿಂದ ಮಣಿಸಿದರು.

2023ರ ಅಂತ್ಯದಲ್ಲಿ ವಿಯೆನ್ನಾ ಹಾಗೂ ಎಟಿಪಿ ಫೈನಲ್ ನಲ್ಲಿ ವಿಜಯಶಾಲಿಯಾಗಿದ್ದ ಅಮೆರಿಕ-ಬ್ರಿಟನ್ ಜೋಡಿ ನಾಲ್ಕು ಫೈನಲ್ ನಲ್ಲಿ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದೆ.

ಬೋಪಣ್ಣ ಹಾಗೂ ಎಬ್ಡೆನ್ ಅವರ 2024ರ ಟೆನಿಸ್ ಪಯಣವು ರೋಚಕ ಪಂದ್ಯದಿಂದ ಆರಂಭವಾಗಿದೆ. ನಿಕೊಲಸ್ ಬರೆಂಟೊಸ್ ಹಾಗೂ ರಫೆಲ್ ಮಟೊಸ್ರನ್ನು 6-2, 6-7(4), 10-7 ಅಂತರದಿಂದ ಮಣಿಸಿ ಎಟಿಪಿ 250 ಹಾರ್ಡ್ ಕೋರ್ಟ್ ಟೂರ್ನಿಯಲ್ಲಿ ಸೆಮಿ ಫೈನಲ್ ತಲುಪಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News