×
Ad

2025-26ರ ಐಎಸ್‌ಎಲ್ ಆಯೋಜನೆಗೆ ಮುಂದಾದ ಎಐಎಫ್‌ಎಫ್

Update: 2026-01-03 23:07 IST

Photo Credit : NDTV 


ಹೊಸದಿಲ್ಲಿ, ಜ.3: ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್)2025-26ರ ಋತುವಿನ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್)ನಡೆಸುವುದಾಗಿ ಶನಿವಾರ ದೃಢಪಡಿಸಿದೆ. ಮುಂದಿನ ವಾರ ದಿನಾಂಕವನ್ನು ಪ್ರಕಟಿಸಲಿದೆ.

ಕಾರ್ಯಕಾರಿ ಸಮಿತಿ ಸಭೆ ಹಾಗೂ ನಂತರದ ವಾರ್ಷಿಕ ಸಾಮಾನ್ಯಸಭೆಯ ನಂತರ 2025ರ ಡಿಸೆಂಬರ್ 20ರಂದು ರಚಿಸಲಾದ ಎಐಎಫ್‌ಎಫ್-ಐಎಸ್‌ಎಲ್ ಸಮನ್ವಯ ಸಮಿತಿಯು ಸಲ್ಲಿಸಿದ ವರದಿಯನ್ನು ಪರಿಗಣಿಸಲು ಹಾಗೂ ಅಂಗೀಕರಿಸಲು ಎಐಎಫ್‌ಎಫ್ ತುರ್ತು ಸಮಿತಿಯ ಸಭೆ ಶನಿವಾರ ಸಭೆ ಸೇರಿತ್ತು.

ಜನವರಿ 2ರೊಳಗೆ ತನ್ನ ವರದಿಯನ್ನು ಎಐಎಫ್‌ಎಫ್ ಸಚಿವಾಲಯಕ್ಕೆ ಸಲ್ಲಿಸುವಂತೆ ಸಮನ್ವಯ ಸಮಿತಿಯನ್ನು ಕೋರಲಾಯಿತು. ಈ ವರದಿಯನ್ನು ಎಐಎಫ್‌ಎಫ್ ತುತುರ್ ಸಮಿತಿಯು ಔಪಚಾರಿಕವಾಗಿ ಅಂಗೀಕರಿಸಿತು. ಇದು ಲೀಗ್ ಅನ್ನು ಭಾರತೀಯ ಫುಟ್ಬಾಲ್‌ನ ಆಡಳಿತ ಮಂಡಳಿಯು ನಡೆಸಬೇಕೆಂದು ಶಿಫಾರಸು ಮಾಡಿತು.

ಕಳೆದ ಸೆಪ್ಟಂಬರ್‌ನಲ್ಲಿ ಆರಂಭವಾಗಬೇಕಾಗಿದ್ದ ಐಎಸ್‌ಎಲ್, ವಾಣಿಜ್ಯ ಪಾಲುದಾರರ ಕೊರತೆಯಿಂದಾಗಿ ಇನ್ನೂ ಆರಂಭವಾಗಿಲ್ಲ.

ಶುಕ್ರವಾರ, ಸುನೀಲ್ ಚೆಟ್ರಿ, ಗುರುಪ್ರೀತ್ ಸಿಂಗ್ ಸಂಧು ಹಾಗೂ ಸಂದೇಶ್ ಜಿಂಗನ್ ಅವರಂತಹ ಹಲವು ಫುಟ್ಬಾಲ್ ಆಟಗಾರರು ‘ಸೇವ್ ಇಂಡಿಯನ್ ಫುಟ್ಬಾಲ್’ಎಂಬ ಶೀರ್ಷಿಕೆಯ ವೀಡಿಯೊವನ್ನು ಬಿಡುಗಡೆ ಮಾಡಿದ್ದರು. ಫಿಫಾ ಹಾಗೂ ಫಿಫ್‌ಪ್ರೊ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News