×
Ad

ಭಾರತದ ಮಹಿಳಾ ಕ್ರಿಕೆಟ್ ತಂಡದ ಫೋಟೊ ಕ್ಲಿಕ್ಕಿಸಿದ ಆಸ್ಟ್ರೇಲಿಯದ ನಾಯಕಿ ಅಲಿಸಾ ಹೀಲಿ!

Update: 2023-12-24 23:13 IST

Photo : JioCinema

ಮುಂಬೈ: ಭಾರತೀಯ ಮಹಿಳಾ ತಂಡ ಆಸ್ಟ್ರೇಲಿಯ ವಿರುದ್ದದ ಏಕೈಕ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದೆ. ಪಂದ್ಯದ ವೇಳೆ ಮೈದಾನದೊಳಗೆ ಭಾರತದ ನಾಯಕಿ ಹರ್ಮನ್ಪ್ರೀತ್ ಹಾಗೂ ಆಸ್ಟ್ರೇಲಿಯ ನಾಯಕಿ ಅಲಿಸಾ ಹೀಲಿ ಮಾತಿನ ಚಕಮಕಿಯನ್ನು ನಡೆಸಿದ್ದರು.

ಪಂದ್ಯ ಮುಗಿದ ನಂತರ ಕ್ಯಾಮರಾವನ್ನು ಕೈಗೆತ್ತಿಕೊಂಡ ಹೀಲಿ ಐತಿಹಾಸಿಕ ಗೆಲುವಿನ ಸಂಭ್ರಮದಲ್ಲಿ ಮುಳುಗಿದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಫೋಟೊವನ್ನು ಕ್ಲಿಕ್ಕಿಸಿದರು. ಆಸ್ಟ್ರೇಲಿಯ ನಾಯಕಿಯ ಈ ನಡವಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಯಿತು.

ಅಂತರ್ಜಾಲ ಜಗತ್ತು ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಶ್ಲಾಘಿಸಿತು. ಜೊತೆಗೆ ಹೀಲಿಯ ಕ್ರೀಡಾ ಸ್ಫೂರ್ತಿಯನ್ನು ಹೊಗಳಿತು.

ಸೋಲಿನ ಹೊರತಾಗಿಯೂ ಇನ್ನಷ್ಟು ಈ ರೀತಿಯ ಪಂದ್ಯಗಳನ್ನು ಆಯೋಜಿಸಬೇಕೆಂದು ಹೀಲಿ ಆಗ್ರಹಿಸಿದರು.

ಅಂತಿಮವಾಗಿ ಇದೊಂದು ನಿಜವಾಗಿಯೂ ಆನಂದಾಯಕ ಅನುಭವ. ಒಂದೇ ಟೆಸ್ಟ್ ಪಂದ್ಯವನ್ನಾಡುವುದು ಕಷ್ಟಕರ ಎನ್ನುವುದು ನಮಗೆ ತಿಳಿದಿತ್ತು. ವಾತಾವರಣಕ್ಕೆ ಹೊಂದಿಕೊಳ್ಳಲು, ಆಟದ ಶೈಲಿಯನ್ನು ಕಂಡುಕೊಳ್ಳಲು ಸಮಯದ ಅಭಾವವಿತ್ತು ಎಂದು ಹೀಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News