×
Ad

ಸತತ ಎರಡನೆ ಬಾರಿ ಅಮೆರಿಕ ಓಪನ್ ಪ್ರಶಸ್ತಿಗೆ ಮುತ್ತಿಕ್ಕಿದ ಅರೈನಾ ಸಬಲೆಂಕ

Update: 2025-09-07 11:00 IST

Photo | PTI

ನ್ಯೂಯಾರ್ಕ್: ಬೆಲಾರಸ್ ನ 27 ವರ್ಷದ ಟೆನಿಸ್‌ ತಾರೆ ಅರೈನಾ ಸಬಲೆಂಕ ಸತತ ಎರಡನೆ ಬಾರಿ ಅಮೆರಿಕ ಓಪನ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಅಮೆರಿಕದ ಅಮಂಡ ಅನಿಮೋವಾರನ್ನು 6-3 7-6 (3) ನೇರ ಸೆಟ್ ಗಳ ಅಂತರದಲ್ಲಿ ಪರಾಭವಗೊಳಿಸುವ ಮೂಲಕ ಅರೈನಾ ಸಬಲೆಂಕ ಈ ಸಾಧನೆ ಮಾಡಿದರು.

ನಂ.1 ಶ್ರೇಯಾಂಕಿತರಾಗಿದ್ದ ಅರೈನಾ ಸಬಲೆಂಕ, ಸೆರೆನಾ ವಿಲಿಯಮ್ಸ್ ನಂತರ ಸತತ ಎರಡನೆ ಬಾರಿ ಅಮೆರಿಕ ಓಪನ್ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದರು. 2012-14ರ ನಡುವೆ ಸೆರೆನಾ ವಿಲಿಯಮ್ಸ್ ಈ ಸಾಧನೆ ಮಾಡಿದ್ದರು.

ಸುಮಾರು 24,000ಕ್ಕಿಂತಲೂ ಹೆಚ್ಚು ಪ್ರೇಕ್ಷಕರ ಬೆಂಬಲ ಹೊಂದಿದ್ದ ಅಮೆರಿಕ ಆಟಗಾರ್ತಿ ಅಮಂಡ ಅನಿಮೋವಾರನ್ನು ಫೈನಲ್ ಪಂದ್ಯದಲ್ಲಿ ಮಣಿಸುವ ಮೂಲಕ, ಬೆಲಾರಸ್ ನ ಅರೈನಾ ಸಬಲೆಂಕ ನಾಲ್ಕನೆ ಗ್ರ್ಯಾಂಡ್ ಸ್ಲ್ಯಾಮ್ ಟ್ರೋಫಿಯನ್ನು ಹೆಮ್ಮೆಯಿಂದ ಎತ್ತಿ ಹಿಡಿದರು.

ಫೈನಲ್ ಪಂದ್ಯ ಮುಕ್ತಾಯಗೊಂಡ ನಂತರ ಮಾತನಾಡಿದ ರನ್ನರ್ ಅಪ್ ಅಮಂಡ ಅನಿಮೋವಾ, “ನಾನು ನಿಜಕ್ಕೂ ಆಕೆಯನ್ನು ಇಷ್ಟಪಡುತ್ತೇನೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ, ಮೆಲ್ಬೋರ್ನ್ ಪಾರ್ಕ್ ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಮ್ಯಾಡಿಸನ್ ಕೀಸ್ ಹಾಗೂ ರೊಲಾಂಡ್ ಗ್ಯಾರೋಸ್ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಕೋಕೊ ಗೌಫ್ ಎದುರು ಅರೈನಾ ಸಬಲೆಂಕ ರನ್ನರ್ ಅಪ್ ಆಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News