Photo Credit: PTI

ಹೊಸದಿಲ್ಲಿ, ಆ.26: ಭಾರತೀಯ ಪುರುಷರ ಕ್ರಿಕೆಟ್ ತಂಡವು ಸೆ.28ರಂದು ಜಪಾನ್ ತಂಡವನ್ನು ಎದುರಿಸುವ ಮೂಲಕ ಏಶ್ಯನ್ ಗೇಮ್ಸ್ ನಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಮಹಿಳೆಯರ ಕ್ರಿಕೆಟ್ ತಂಡ ಕೂಡ ಸೆ.18ರಂದು ಜಪಾನ್ ವಿರುದ್ಧ ಆಡುವುದರೊಂದಿಗೆ ಟೂರ್ನಿಯಲ್ಲಿ ತನ್ನ ಆರಂಭ ಪಡೆಯಲಿದೆ.

ಭಾರತದ ಎರಡೂ ತಂಡಗಳು ಶ್ರೇಯಾಂಕ ಪಡೆದಿದ್ದು, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮ್ಮ ಅಭಿಯಾನವನ್ನು ಆರಂಭಿಸಲಿವೆ. ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತದ ಪುರುಷರ ತಂಡ ಹಾಗೂ ಹರ್ಮನ್ಪ್ರೀತ್ ಕೌರ್ ಸಾರಥ್ಯದ ಮಹಿಳೆಯರ ಕ್ರಿಕೆಟ್ ತಂಡವು ಜಪಾನ್ ನಲ್ಲಿ ನಡೆಯಲಿರುವ ಏಶ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ನೆಚ್ಚಿನ ತಂಡಗಳಾಗಿ ಹೊರಹೊಮ್ಮಿವೆ.

ಚೀನಾದಲ್ಲಿ ನಡೆದಿದ್ದ ಈ ಹಿಂದಿನ ಏಶ್ಯನ್ ಗೇಮ್ಸ್ ನಲ್ಲಿ ಭಾರತ ತಂಡವು ಸ್ಪರ್ಧಾವಳಿಯಲ್ಲಿ ಮಿಂಚಿತ್ತು.

ಮಹಿಳೆಯರ ಕ್ರಿಕೆಟ್ ನಲ್ಲಿ ಭಾರತ ತಂಡದ ಎದುರಾಳಿಯನ್ನು ಈಗಾಗಲೇ ನಿರ್ಧರಿಸಲಾಗಿದೆ. ಪುರುಷರ ತಂಡವು ಅಫ್ಘಾನಿಸ್ತಾನ, ಜಪಾನ್ ಹಾಗೂ ನೇಪಾಳ ಒಳಗೊಂಡ ‘ಎ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿರುವ ತಂಡವನ್ನು ಎದುರಿಸಲಿದೆ.

ಮಹಿಳೆಯರ ಕ್ರಿಕೆಟ್ ಫೈನಲ್ ಪಂದ್ಯವು ಸೆ.22ರಂದು ನಡೆಯಲಿದೆ. ಪುರುಷರ ಕ್ರಿಕೆಟ್ ತಂಡದ ಫೈನಲ್ ಪಂದ್ಯವು ಅಕ್ಟೋಬರ್ 3ರಂದು ನಿಗದಿಯಾಗಿದೆ.

ಪುರುಷರ ಕ್ರಿಕೆಟ್ ಸ್ಪರ್ಧಾವಳಿಯಲ್ಲಿ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಶ್ರೀಲಂಕಾ ಶ್ರೇಯಾಂಕಿತ ತಂಡಗಳಾಗಿದ್ದು, ಮಹಿಳೆಯರ ಕ್ರಿಕೆಟ್ನಲ್ಲಿ ಭಾರತ ಸಹಿತ ಕೇವಲ ಎಂಟು ತಂಡಗಳು ಶ್ರೇಯಾಂಕ ಪಡೆದಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor