Asian Games | 5,000 ಮೀ. ಓಟದಲ್ಲಿ 2ನೇ ಕಂಚಿನ ಪದಕ ಜಯಿಸಿದ ಪಾರುಲ್ ಚೌಧರಿ
ಪಾರುಲ್ ಚೌಧರಿ | Photo Credit : PTI
ನಗೋಯ: ಭಾರತದ ಪಾರುಲ್ ಚೌಧರಿ ಈಗ ನಡೆಯುತ್ತಿರುವ ಏಶ್ಯನ್ ಗೇಮ್ಸ್‌ನಲ್ಲಿ ಮತ್ತೊಂದು ಪದಕ ಜಯಿಸಿದರು. ಮಹಿಳೆಯರ 5,000 ಮೀ.ಫೈನಲ್‌ನಲ್ಲಿ 15:14.61 ಅವಧಿಯಲ್ಲಿ ಗುರಿ ತಲುಪಿದ ಪಾರುಲ್ ಕಂಚಿನ ಪದಕ ಜಯಿಸಿದರು.
ಬಹರೈನ್‌ನ ವಿನ್‌ಫ್ರೆಡ್ ಯವಿ(15:10.18)ಚಿನ್ನ ಜಯಿಸಿದರೆ, ಜಪಾನಿನ ನೊರೊಮಿ ಟನಕ(15:11.65)ಬೆಳ್ಳಿ ಪದಕ ಗೆದ್ದರು.
ಭಾರತದ ಅನುಭವಿ ದೂರ ಅಂತರದ ಓಟಗಾರ್ತಿ ಪಾರುಲ್ ಪ್ರಸಕ್ತ ಗೇಮ್ಸ್‌ನಲ್ಲಿ ಎರಡನೇ ಪದಕ ಜಯಿಸಿದರು. ಈ ಮೊದಲು ಮಹಿಳೆಯರ 3,000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.
2023ರ ಗೇಮ್ಸ್‌ನಲ್ಲಿ ಮಹಿಳೆಯರ 5000 ಮೀ.ನಲ್ಲಿ ಚಿನ್ನ ಹಾಗೂ ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಗೆದ್ದಿದ್ದರು.
ಎರಡು ಆವೃತ್ತಿಗಳ ಗೇಮ್ಸ್‌ನಲ್ಲಿನ ತನ್ನ ಪ್ರದರ್ಶನದ ಮೂಲಕ ಪಾರುಲ್ ಅವರು ಭಾರತದ ಓರ್ವ ಶ್ರೇಷ್ಠ ದೂರ ಅಂತರದ ಓಟಗಾರ್ತಿಯಾಗಿ ಹೊರಹೊಮ್ಮಿದ್ದು, ನಗೋಯ ಗೇಮ್ಸ್‌ನಲ್ಲಿ ದೇಶದ ಅತ್ಲೆಟಿಕ್ಸ್ ಅಭಿಯಾನದಲ್ಲಿ ಹುರುಪು ಮೂಡಿಸಿದ್ದಾರೆ.