ಮುರಳಿ ಶ್ರೀಶಂಕರ್ | Photo Credit : PTI  

ನಗೋಯ: ಭಾರತದ ಮುರಳಿ ಶ್ರೀಶಂಕರ್ ಗಾಯದ ಸಮಸ್ಯೆಯಿಂದ ತನ್ನ ಕೊನೆಯ ಎರಡು ಸುತ್ತಿನಿಂದ ಹೊರಗುಳಿದಿದ್ದ ಹೊರತಾಗಿಯೂ 8.07 ಮೀ. ದೂರದ ಶ್ರೇಷ್ಠ ಪ್ರದರ್ಶನದ ಬಲದಿಂದ ಪುರುಷರ ಲಾಂಗ್‌ಜಂಪ್‌ನಲ್ಲಿ ಬೆಳ್ಳಿ ಪದಕ ತನ್ನದಾಗಿಸಿಕೊಂಡರು.

ತನ್ನ ನಾಲ್ಕನೇ ಪ್ರಯತ್ನದಲ್ಲಿ ಗಾಯಗೊಂಡಾಗ ಶ್ರೀಶಂಕರ್ ಎರಡನೇ ಸ್ಥಾನದಲ್ಲಿದ್ದರು. ಸ್ಪರ್ಧೆಯಲ್ಲಿ ಮುಂದುವರಿಯಲು ಸಮರ್ಥರಾದ ಮುರಳಿ ತನ್ನ ಎದುರಾಳಿಗಳು ತಮ್ಮ ಜಂಪ್‌ಗಳನ್ನು ಪೂರ್ಣಗೊಳಿಸುವುದನ್ನು ನೋಡುತ್ತಾ ನಿಂತರು. ಅದೃಷ್ಟವಶಾತ್ ಯಾರೂ ಕೂಡ ಶ್ರೀಶಂಕರ್ ಅವರ ಪ್ರದರ್ಶನ(8.07 ಮೀ.)ಮೀರುವಲ್ಲಿ ವಿಫಲರಾದರು. ಹೀಗಾಗಿ ಶ್ರೀಶಂಕರ್ ಬೆಳ್ಳಿ ಪದಕ ಜಯಿಸಿದರು.

ಚೀನಾದ ಯುಹಾವೊ ಶಿ(8.17ಮೀ.) ಚಿನ್ನದ ಪದಕ ಜಯಿಸಿದರೆ, ಉಜ್ಬೇಕಿಸ್ತಾನದ ಅನ್ವರ್ (8.06 ಮೀ.)ಕಂಚು ಜಯಿಸಿದರು.

ಭಾರತದ ಇತರ ಫೈನಲಿಸ್ಟ್‌ಗಳಾದ ಸೊಲೊಮನ್ ಡೇವಿಡ್ 7.70 ಮೀ. ದೂರ ಜಂಪ್ ಮಾಡಿ ಏಳನೇ ಸ್ಥಾನ ಪಡೆದರು.

ಸ್ಪರ್ಧಾವಳಿಯಲ್ಲಿ ಶ್ರೀಶಂಕರ್ ಎದುರಿಸಿದ ಪರಿಸ್ಥಿತಿಯನ್ನು ಗಮನಿಸಿದರೆ ಬೆಳ್ಳಿ ಗೆದ್ದಿರುವುದು ಮಹತ್ವದ ಸಾಧನೆಯಾಗಿದೆ. ಪದಕ ಗೆಲ್ಲುವ ಹಂತ ತಲುಪಿದ ನಂತರ ಗಾಯದ ಸಮಸ್ಯೆಯಿಂದಾಗಿ ಅವರು ಕೊನೆಯ ಎರಡು ಸುತ್ತುಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ಉಳಿದ ಕ್ರೀಡಾಪಟುಗಳು ಶ್ರೀಶಂಕರ್ ಪ್ರದರ್ಶನವನ್ನು ಮೀರಿ ನಿಲ್ಲದ ಕಾರಣ ಬೆಳ್ಳಿ ಪದಕ ಒಲಿಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor