Photo Credit : X

ನಿಶಿನ್(ಜಪಾನ್): ನಿರಂತರವಾಗಿ ಸುರಿದ ಮಳೆಯಿಂದಾಗಿ ಅಫ್ಘಾನಿಸ್ತಾನ ತಂಡದ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯವು ಒಂದೂ ಎಸೆತ ಕಾಣದೆ ರದ್ದಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಪುರುಷರ ಕ್ರಿಕೆಟ್ ತಂಡವು ಸೆಮಿ ಫೈನಲ್‌ಗೆ ಪ್ರವೇಶಿಸಿದೆ.

ಕಪ್ಪು ಮೋಡಗಳು ಹಾಗೂ ನಿರಂತರ ಮಳೆಯಿಂದಾಗಿ ಮೈದಾನದಲ್ಲಿ ಹೊದಿಕೆಗಳನ್ನು ಹಾಸಲಾಗಿತ್ತು. ಪರಿಸ್ಥಿತಿಯು ಸುಧಾರಿಸುವ ಲಕ್ಷಣ ಕಂಡುಬಂದಿರಲಿಲ್ಲ. ಹೀಗಾಗಿ ಪಂದ್ಯವನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ. ಪಂದ್ಯಾವಳಿಯ ನಾಕೌಟ್ ನಿಯಮಗಳ ಪ್ರಕಾರ ಭಾರತವು ಅಂತಿಮ ನಾಲ್ಕರ ಘಟ್ಟ ತಲುಪಿದೆ.

ಭಾರತವು ಇದೀಗ ಸೆಮಿ ಫೈನಲ್‌ನಲ್ಲಿ ಶ್ರೀಲಂಕಾ ಅಥವಾ ನೇಪಾಳ ತಂಡವನ್ನು ಎದುರಿಸಲಿದೆ. 2023ರ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತ ಅದನ್ನು ಉಳಿಸಿಕೊಳ್ಳಲು ತನ್ನ ಪ್ರಯತ್ನ ಮುಂದುವರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor