Photo Credit: ANI

ನಗೋಯ: ಏಶ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಜಿಮ್ನಾಸ್ಟ್ ಪ್ರಣತಿ ನಾಯಕ್ ಅರ್ಹತಾ ಸುತ್ತಿನಲ್ಲಿ 19 ಸ್ಪರ್ಧಿಗಳ ಪೈಕಿ ಏಳನೇ ಸ್ಥಾನ ಪಡೆಯುವ ಮೂಲಕ ಮಹಿಳೆಯರ ವೈಯಕ್ತಿಕ ವೋಲ್ಟ್ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.

ಎಂಟು ಜಿಮ್ನಾಸ್ಟಿಕ್‌ಗಳ ನಡುವೆ ಸೆ.24ರಂದು ಫೈನಲ್ ಪಂದ್ಯ ನಡೆಯಲಿದೆ. ಕೇವಲ ವೋಲ್ಟ್‌ನಲ್ಲಿ ಮಾತ್ರ ಸ್ಪರ್ಧಿಸುತ್ತಿರುವ ಪ್ರಣತಿ ತನ್ನ ಎರಡು ಪ್ರಯತ್ನಗಳಲ್ಲಿ ಸ್ಥಿರ ಪ್ರದರ್ಶನ ನೀಡಿ ಪದಕ ಸುತ್ತಿನಲ್ಲಿ ಸ್ಥಾನ ಪಡೆದರು.

31ರ ವಯಸ್ಸಿನ ಪ್ರಣತಿ ಮೊದಲ ಪ್ರಯತ್ನದಲ್ಲಿ 13,000 ಹಾಗೂ ಎರಡನೇ ಪ್ರಯತ್ನದಲ್ಲಿ 12,433 ಅಂಕ ಗಳಿಸಿದರು. ಟೋಕಿಯೊ ಒಲಿಂಪಿಯನ್ ಪ್ರಣತಿ ಏಶ್ಯನ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮೂರು ಬಾರಿ ಕಂಚಿನ ಪದಕ ಜಯಿಸಿದ್ದರು. 2026ರಲ್ಲಿ ಉಜ್ಬೇಕಿಸ್ತಾನದಲ್ಲಿ ನಡೆದಿದ್ದ ವರ್ಲ್ಡ್ ಚಾಲೆಂಜ್ ಕಪ್‌ನಲ್ಲಿ ಮಹಿಳೆಯರ ವೋಲ್ಟ್‌ನಲ್ಲಿ ಬೆಳ್ಳಿ ಪದಕ ಜಯಿಸಿ ಏಶ್ಯನ್ ಗೇಮ್ಸ್‌ಗೆ ಪ್ರವೇಶಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor