Asian Games | ವುಶು: ಪದಕ ಖಚಿತಪಡಿಸಿದ ರೋಶಿಬಿನಾ ದೇವಿ
Photo Credit: thenewsmill
ಟೋಕಿಯೊ: ಏಶ್ಯನ್ ಗೇಮ್ಸ್‌ನ ಮಹಿಳೆಯರ 60 ಕೆಜಿ ವುಶು ಕ್ವಾರ್ಟರ್ ಫೈನಲ್‌ನಲ್ಲಿ ಮಕಾವಿನ ಮಾನ್ ಸಿಂಗ್ ಚು ಅವರನ್ನು 5-0 ಅಂತರದಿಂದ ಮಣಿಸಿದ ಭಾರತದ ಎನ್.ರೋಶಿಬಿನಾ ದೇವಿ ಪದಕ ಖಚಿತಪಡಿಸಿದರು.
ಮಣಿಪುರದ ಅತ್ಲೀಟ್ ರೋಶಿಬಿನಾ ಅಂಕಗಳ ವ್ಯತ್ಯಾಸದಲ್ಲಿ ಸಿನ್ ಚು ಅವರನ್ನು ಮಣಿಸಿದ್ದು, ಇದೀಗ ಸತತ ಮೂರನೇ ಏಶ್ಯಾಡ್‌ನಲ್ಲಿ ಪದಕ ದೃಢಪಡಿಸಿದರು.
ಸೆಮಿ ಫೈನಲ್‌ನಲ್ಲಿ ರೋಶಿಬಿನಾ ದೇವಿ ಅವರು ಇಂಡೋನೇಶ್ಯದ ಥಾನಿಯಾ ಕುಸುಮಾನಿಂಗ್‌ಟಿಯಸ್‌ರನ್ನು ಎದುರಿಸಲಿದ್ದಾರೆ.
ಈ ಗೆಲುವಿನೊಂದಿಗೆ ಕಡೆಪಕ್ಷ ಕಂಚಿನ ಪದಕ ದೃಢಪಡಿಸಿದ ರೋಶಿಬಿನಾ 2018ರ ಜಕಾರ್ತ ಗೇಮ್ಸ್‌ನಲ್ಲಿ ಕಂಚು ಹಾಗೂ 2023ರ ಹಾಂಗ್‌ಝೌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ರೊಶಿಬಿನಾ ದೇವಿ ಕೊನೆಯ ಕ್ಷಣದಲ್ಲಿ ಭಾರತೀಯ ವುಶು ತಂಡವನ್ನು ಸೇರಿದ್ದರು. ಗಾಯಗೊಂಡಿರುವ ದಿವ್ಯಾಂಶಿ ಚೌಧರಿ ಬದಲಿಗೆ ಆಯ್ಕೆಯಾಗಿದ್ದರು ಎಂದು ವುಶು ಒಕ್ಕೂಟ ತಿಳಿಸಿದೆ.
ಪುರುಷರ 56 ಕೆಜಿ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಆರ್ಯನ್ ಉಜ್ಬೇಕಿಸ್ತಾನದ ಅಬ್ದುರಾಶಿಟೋವ್ ವಿರುದ್ಧ 1-2 ಅಂತರದಿಂದ ಸೋತಿದ್ದಾರೆ.