ಪುರುಷರ ಕಬಡ್ಡಿ | ದಕ್ಷಿಣ ಕೊರಿಯಾ ವಿರುದ್ಧ ಭಾರತಕ್ಕೆ ಗೆಲುವು
Photo Credit: Indian Olympic Association/Instagram
ನಗೋಯ: ಟೋಕಾಯ್ ಸಿಟಿಝನ್ಸ್ ಜಿಮ್ನಾಸಿಯಮ್‌ನಲ್ಲಿ ಮಂಗಳವಾರ ಬೆಳಗ್ಗೆ ನಡೆದ ತನ್ನ ಎರಡನೇ ಗ್ರೂಪ್ ‘ಎ’ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು 63-31 ಅಂಕಗಳ ಅಂತರದಿಂದ ಮಣಿಸಿದ ಭಾರತದ ಪುರುಷರ ಕಬಡ್ಡಿ ತಂಡವು 2026ರ ಏಶ್ಯನ್ ಗೇಮ್ಸ್‌ನಲ್ಲಿ ತನ್ನ ಉತ್ತಮ ಪ್ರದರ್ಶನ ಮುಂದುವರಿಸಿತು.
ನಾಯಕ ಸುನೀಲ್ ಕುಮಾರ್ ನಾಯಕತ್ವದ ತಂಡವು ಸ್ಪರ್ಧೆಯ ಆರಂಭದಲ್ಲಿ ಹಿಡಿತ ಸಾಧಿಸಿತು. ಪಂದ್ಯದುದ್ದಕ್ಕೂ ಭಾರತೀಯ ರೈಡಿಂಗ್ ವಿಭಾಗ ಮೇಲುಗೈ ಸಾಧಿಸಿತು. ಭಾರತವು ಮೊದಲಾರ್ಧದಲ್ಲಿ 34-14ರಿಂದ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ಕೊರಿಯಾವು ಒಂದಷ್ಟು ಹೋರಾಟವನ್ನು ನೀಡಿತು. ಭಾರತ ತಂಡವು ಇನ್ನೂ 29 ಅಂಕ ಸೇರಿಸಿತು.
ಈ ಗೆಲುವಿನ ಮೂಲಕ ಭಾರತವು ಎ ಗುಂಪಿನಲ್ಲಿ ಅಗ್ರ ಸ್ಥಾನ ಭದ್ರಪಡಿಸಿಕೊಂಡಿತು. ಆತಿಥೇಯ ಜಪಾನ್ ಹಾಗೂ ಕೊರಿಯಾವನ್ನು ಸತತ ಪಂದ್ಯಗಳಲ್ಲಿ ಸೋಲಿಸಿರುವ ಪುರುಷರ ತಂಡವು ಸೆ.23ರಂದು ಬಾಂಗ್ಲಾದೇಶವನ್ನು ಎದುರಿಸಲಿದೆ. ಹಿಂದಿನ 10 ಆವೃತ್ತಿಗಳ ಏಶ್ಯನ್ ಗೇಮ್ಸ್‌ನಲ್ಲಿ 9ನೇ ಚಿನ್ನದ ಪದಕದತ್ತ ಕಣ್ಣಿಟ್ಟಿದೆ.