Photo Credit : X 

ಸಾನೊ: ಏಷ್ಯನ್ ಗೇಮ್ಸ್‌ ಗೆ ಮುನ್ನ ನಡೆದ ಏಕೈಕ T20 ಅಂತರರಾಷ್ಟ್ರೀಯ (T20I) ಪಂದ್ಯದಲ್ಲಿ ಜಪಾನ್ ನೀಡಿದ ತೀವ್ರ ಪೈಪೋಟಿಯನ್ನು ಮೆಟ್ಟಿನಿಂತ ಭಾರತ 2 ರನ್‌ಗಳ ರೋಚಕ ಜಯ ಸಾಧಿಸಿತು.

ಮಂಗಳವಾರ ಸಾನೊದಲ್ಲಿ ನಡೆದ ಪಂದ್ಯವು ಮಳೆಯ ಕಾರಣ ತಲಾ ಐದು ಓವರ್‌ ಗಳಿಗೆ ಸೀಮಿತಗೊಂಡಿತ್ತು. ಹೀಗಾಗಿ, ಭಾರತದ T20I ಇತಿಹಾಸದಲ್ಲೇ ಅತ್ಯಂತ ರೋಚಕ ಹಾಗೂ ಅಲ್ಪ ಅಂತರದ ಫಲಿತಾಂಶ ಕಂಡ ಪಂದ್ಯಗಳಲ್ಲಿ ಇದೂ ಒಂದಾಯಿತು.

ಇದು 2026ರ ಏಷ್ಯನ್ ಗೇಮ್ಸ್‌ನ ಅಧಿಕೃತ ಪಂದ್ಯವಲ್ಲ. ಏಷ್ಯನ್ ಗೇಮ್ಸ್‌ಗೆ ಭಾರತದ ಸಿದ್ಧತೆಯ ಭಾಗವಾಗಿ ನಡೆದ ಪಂದ್ಯ. ಮೊದಲು ಬ್ಯಾಟ್ ಮಾಡಿದ ಭಾರತ ಐದು ಓವರ್‌ಗಳಲ್ಲಿ 32 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಭಾರತದ ಸ್ಪಿನ್ನರ್‌ಗಳು ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಜಪಾನ್ ತಂಡವನ್ನು ಐದು ಓವರ್‌ಗಳಲ್ಲಿ 30 ರನ್‌ಗಳಿಗೆ 9 ವಿಕೆಟ್‌ಗಳಿಗೆ ನಿಯಂತ್ರಿಸುವ ಮೂಲಕ ಭಾರತಕ್ಕೆ ಅಂತಿಮವಾಗಿ ಜಯ ತಂದುಕೊಟ್ಟರು.

ಈ ಗೆಲುವಿನೊಂದಿಗೆ, ಸೂಪರ್ ಓವರ್‌ಗಳ ಮೂಲಕ ಪಡೆದ ಗೆಲುವುಗಳನ್ನೂ ಒಳಗೊಂಡಂತೆ ಪುರುಷರ T20I ಕ್ರಿಕೆಟ್‌ನಲ್ಲಿ 200 ಗೆಲುವು ದಾಖಲಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor