ಪಿ.ವಿ. ಸಿಂಧು | Photo Credit: X/@SportASmile

ನಗೋಯ: ಈಗ ಐಚಿ-ನಗೋಯದಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳೆಯರ ಬ್ಯಾಡ್ಮಿಂಟನ್ ಟೀಮ್ ಆತಿಥೇಯ ಜಪಾನ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 1-3 ಅಂತರದಿಂದ ಸೋಲುಂಡಿದೆ. ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಮಾತ್ರ ಗೆಲುವು ದಾಖಲಿಸಿದರು. ಈ ಸೋಲಿನೊಂದಿಗೆ ಭಾರತವು ಕ್ರೀಡಾಕೂಟದಿಂದ ನಿರ್ಗಮಿಸಿದೆ.

ಡಬಲ್ ಒಲಿಂಪಿಯನ್ ಪಿ.ವಿ. ಸಿಂಧು ವಿರುದ್ಧ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಮಾಜಿ ವಿಶ್ವದ ನಂ.1 ಆಟಗಾರ್ತಿ ಅಕಾನೆ ಯಮಗುಚಿ 21-23, 21-18, 21-11 ಗೇಮ್‌ಗಳಿಂದ ಗೆಲುವು ಸಾಧಿಸಿದರು.

2022ರ ಜೂನಿಯರ್ ವಿಶ್ವ ಚಾಂಪಿಯನ್ ಟೊಮೊಕಾ ಮಿಯಾಝಕಿ ಕೇವಲ 48 ನಿಮಿಷಗಳಲ್ಲಿ ಉನ್ನತಿ ಹೂಡಾರ ಸಿಂಗಲ್ಸ್ ಸವಾಲನ್ನು ಹಿಮ್ಮೆಟ್ಟಿಸಿದರು. ಹೂಡಾ 16-21, 18-21 ನೇರ ಗೇಮ್‌ಗಳಿಂದ ಸೋಲುಂಡರು.

ಟ್ರೀಸಾ-ಗಾಯತ್ರಿ ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ಮಯು ಮಟ್ಸುಮೊಟೊ ವಿರುದ್ಧ 21-17, 21-16 ನೇರ ಗೇಮ್‌ಗಳಿಂದ ಜಯ ಗಳಿಸಿದಾಗ ಭಾರತ ತಂಡಕ್ಕೆ ಅಲ್ಪ ವಿಶ್ವಾಸ ಮೂಡಿತು. ಆದರೆ ತನ್ವಿ ಶರ್ಮಾ ಮುಂದಿನ ಸುತ್ತಿನಲ್ಲಿ ನೊರೊಮಿ ಒಕುಹರಾ ವಿರುದ್ಧ 12-21, 10-21 ಗೇಮ್‌ಗಳಿಂದ ಸೋಲನುಭವಿಸಿದರು. ಜಪಾನ್ 3-1 ಅಂತರದಿಂದ ಜಯಶಾಲಿಯಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor